ವಿದ್ಯಾರ್ಥಿಗಳ ಬಂಧನ: ₹ 3.85 ಲಕ್ಷ ಮೌಲ್ಯದ ಸಾಮಗ್ರಿ ವಶ

ಗುರುವಾರ , ಏಪ್ರಿಲ್ 25, 2019
31 °C

ವಿದ್ಯಾರ್ಥಿಗಳ ಬಂಧನ: ₹ 3.85 ಲಕ್ಷ ಮೌಲ್ಯದ ಸಾಮಗ್ರಿ ವಶ

Published:
Updated:
Prajavani

ಬೀದರ್: ಇಲ್ಲಿಯ ನ್ಯೂಟೌನ್‌ ಠಾಣೆಯ ಪೊಲೀಸರು ಕಳ್ಳತನ ಆರೋಪದಲ್ಲಿ ಶನಿವಾರ ಎರಡು ಬೈಕ್‌ ಹಾಗೂ ಕಂಪ್ಯೂಟರ್‌ ಸಾಮಗ್ರಿಗಳನ್ನು ವಶಪಡಿಸಿಕೊಂಡು ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.

ಬೀದರ್‌ನ ವಿದ್ಯಾನಗರ ಕಾಲೊನಿಯ ಷಣ್ಮುಖ ರಾಜಕುಮಾರ ಖಂಡ್ರೆ, ಭಾಲ್ಕಿಯ ಲೆಕ್ಚರ್‌ ಕಾಲೊನಿಯ ರಾಘವೇಂದ್ರ ಅಲಿಯಾಸ್ ಚಪಾತೆ ಸುರೇಶ ಜೋತೆಪ್ಪ, ಅವಿನಾಶ ಸಂಗಶೆಟ್ಟಿ ಹಾಗೂ ಯೋಗೇಶ ಈಶ್ವರ ಕಿಂಕರ ಎನ್ನುವವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಆರೋಪಿಗಳಿಂದ ಒಂದು ₹ 45 ಸಾವಿರ ಮೌಲ್ಯದ ಬೈಕ್, ₹ 1 ಲಕ್ಷ ಮೌಲ್ಯದ ಇನ್ನೊಂದು ಬೈಕ್, ₹ 95 ಸಾವಿರ ಮೌಲ್ಯದ ಕಂಪ್ಯೂಟರ್‌ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿಪಿಐ ಡಿ.ಜಿ.ರಾಜಪ್ಪ ಮಾರ್ಗದರ್ಶನದಲ್ಲಿ ಪಿಎಸ್‌ಐ ರುದ್ರಮುನಿ, ಪಿಎಸ್ಐ ಮಡಿವಾಳಪ್ಪ ಬಾಗೋಡಿ, ಸಿಬ್ಬಂದಿ ಧನರಾಜ್ ಗಾದಗಿ, ಚಂದ್ರಕೀರ್ತಿ, ರಾಜಕುಮಾರ ಚಿಕ್ಕಬಸೆ, ಮೋಹನರಾಜ್, ಶೇಖ ಮೋದಿನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !