ಬಸವಕಲ್ಯಾಣ: ವಿಧಾನ ಪರಿಷತ್ ಸದಸ್ಯ ವಿಜಯಸಿಂಗ್ ಕೊಡುಗೆಯಾಗಿ ನೀಡಿರುವ ಧರ್ಮಸಿಂಗ್ ಫೌಂಡೇಷನ್ನ ಉಚಿತ ಆಂಬುಲೆನ್ಸ್ ಸೇವೆಗೆ ನಗರದ ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಮಂಗಳವಾರ ಚಾಲನೆ ನೀಡಲಾಯಿತು.

ತಹಶೀಲ್ದಾರ್ ಸಾವಿತ್ರಿ ಸಲಗರ ಚಾಲನೆ ನೀಡಿದರು. ಪೌರಾಯುಕ್ತ ಗೌತಮಬುದ್ಧ ಕಾಂಬಳೆ, ತಾಲ್ಲೂಕು ಆಸ್ಪತ್ರೆ ಮುಖ್ಯ ವೈದ್ಯೆ ಡಾ.ಅಪರ್ಣಾ ಮಹಾನಂದ, ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ನೀಲಕಂಠ ರಾಠೋಡ, ಮುಖಂಡರಾದ ಬಾಬು ಹೊನ್ನಾನಾಯಕ್, ತಹಶೀನಅಲಿ ಜಮಾದಾರ, ಸಂಜಯಸಿಂಗ್ ಹಜಾರಿ, ನಗರಸಭೆ ಸದಸ್ಯರಾದ ರವೀಂದ್ರ ಬೋರೋಳೆ, ರಾಮ ಜಾಧವ, ಸಂತೋಷ ಗುತ್ತೇದಾರ, ಅಮಾನತ ಅಲಿ, ಶರಣು ಆಲಗೂಡ, ಸೋನುಸಿಂಗ್ ಹಜಾರಿ, ಮಹ್ಮದ್ ಉಪಸ್ಥಿತರಿದ್ದರು.

ಎರಡು ಆಂಬುಲೆನ್ಸ್ ಉಚಿತ ಸೇವೆಗೆ ಲಭ್ಯವಿದ್ದು ಚಾಲಕರ ಭತ್ಯೆ, ಡೀಸೆಲ್ ಹಣ ಸಹ ಧರ್ಮಸಿಂಗ್ ಫೌಂಡೇಷನ್ ಬಸವಕಲ್ಯಾಣ ವತಿಯಿಂದಲೇ ನೀಡಲಾಗುತ್ತದೆ. ಅವಶ್ಯಕತೆ ಇದ್ದವರು ಇವುಗಳನ್ನು ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದು. ಆಂಬುಲೆನ್ಸ್ಗಾಗಿ 9620171108, 9620181108 ಈ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.