ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ತಪಾಸಣೆ ಉಚಿತ ಮೇಳ ಸೆ. 28 ರಿಂದ

Last Updated 27 ಸೆಪ್ಟೆಂಬರ್ 2018, 14:31 IST
ಅಕ್ಷರ ಗಾತ್ರ

ಬೀದರ್: ಡಾ. ಸಾಲಿನ್ಸ್ ನೇತ್ರ ಆಸ್ಪತ್ರೆಯ ಸುವರ್ಣ ಮಹೋತ್ಸವ ಅಂಗವಾಗಿ ನಗರದ ಗೋಲೆಖಾನಾದಲ್ಲಿ ಇರುವ ಮೊಘಲ್ ಗಾರ್ಡನ್‌ನಲ್ಲಿ ಸೆ. 28 ರಿಂದ 30 ರ ವರೆಗೆ ಆರೋಗ್ಯ ತಪಾಸಣೆ ಉಚಿತ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕಿ ಡಾ. ಸಿಬಿಲ್ ಸಾಲಿನ್ಸ್ ತಿಳಿಸಿದ್ದಾರೆ.

ಮೂರೂ ದಿನ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿವಿಧೆಡೆಯ ಪ್ರಸಿದ್ಧ ತಜ್ಞ ವೈದ್ಯರು ವಿವಿಧ ರೋಗಗಳ ತಪಾಸಣೆ ನಡೆಸಲಿದ್ದಾರೆ. ಮೇಳಕ್ಕೆ ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

28 ರಂದು ನೇತ್ರ ತಪಾಸಣೆ, ದಂತ ತಪಾಸಣೆ, 29 ರಂದು ಸಾಮಾನ್ಯ ಆರೋಗ್ಯ, ಶಸ್ತ್ರಚಿಕಿತ್ಸೆ, ಮಕ್ಕಳ ರೋಗ, ನೇತ್ರ, ದಂತ, ಕಿವಿ, ಮೂಗು ಮತ್ತು ಗಂಟಲು ಹಾಗೂ ಚರ್ಮರೋಗಗಳ ತಪಾಸಣೆ, 30 ರಂದು ಸಾಮಾನ್ಯ ಆರೋಗ್ಯ, ಶಸ್ತ್ರಚಿಕಿತ್ಸೆ, ಮಕ್ಕಳ ರೋಗ, ನೇತ್ರ, ದಂತ, ಕಿವಿ, ಮೂಗು ಮತ್ತು ಗಂಟಲು, ಚರ್ಮ ಹಾಗೂ ಸ್ತ್ರೀರೋಗಗಳ ತಪಾಸಣೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯ ನಗರ, ಪಟ್ಟಣ, ಹೋಬಳಿ ಸೇರಿದಂತೆ 200 ಗ್ರಾಮಗಳಲ್ಲಿ ಮೇಳದ ಪ್ರಚಾರ ಮಾಡಲಾಗಿದೆ. ಮೂರು ದಿನಗಳಲ್ಲಿ ಸುಮಾರು ಐದು ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಜಿಲ್ಲೆಯ ರೋಗಿಗಳು ಶಿಬಿರದ ಪ್ರಯೋಜನ ಪಡೆಯಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT