ಸೋಮವಾರ, ಸೆಪ್ಟೆಂಬರ್ 26, 2022
22 °C

ಎಂಜಿನಿಯರ್‌ಗಳ ಭವನಕ್ಕೆ ಅನುದಾನ: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ನಗರದಲ್ಲಿ ಎಂಜಿನಿಯರ್‌ಗಳ ಭವನ ನಿರ್ಮಾಣಕ್ಕೆ ತಮ್ಮ ನಿಧಿಯಿಂದ ₹ 10 ಲಕ್ಷ ಅನುದಾನ ಒದಗಿಸಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಹೇಳಿದರು.

ನಗರದ ಪುಷ್ಪಾಂಜಲಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಎಂಜಿನಿಯರ್‌ಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭವನಕ್ಕೆ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಕೊಡಿಸಲಾಗುವುದು ಎಂದು ಭರವಸೆ ನೀಡಿದರು.

ಎಸಿಸಿಇ(ಐ) ಉಪಾಧ್ಯಕ್ಷ ರಾಜಕುಮಾರ ಕಾಚರಲಾ, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ಇಂಡಿಯಾದ ಬೀದರ್ ಘಟಕದ ಅಧ್ಯಕ್ಷ ಅನಿಲಕುಮಾರ ಔರಾದೆ, ಕಾರ್ಯದರ್ಶಿ ಶಿವಶಂಕರ ಕಾಮಶೆಟ್ಟಿ ಮಾತನಾಡಿದರು.

ಹಿರಿಯ ಎಂಜಿನಿಯರ್‌ಗಳಾದ ಹಾವಶೆಟ್ಟಿ ಪಾಟೀಲ, ವೀರಶೆಟ್ಟಿ ಮಣಗೆ, ರಾಜಶೇಖರ ಕರ್ಪೂರ, ರವಿ ಮೂಲಗೆ, ಗೋರಕನಾಥ ಚನಶೆಟ್ಟಿ, ಚಂದ್ರಕಾಂತ ಮಿರ್ಚೆ, ರಾಚಪ್ಪ ಪಾಟೀಲ, ಸಿ.ಎಸ್. ಪಾಟೀಲ, ರಾಜಶೇಖರ ಮಠ ಇದ್ದರು. ಶ್ರೇಯಾ ಮಹೇಂದ್ರಕರ್ ನಿರೂಪಿಸಿದರು. ಶಿವಕುಮಾರ ಪಾಟೀಲ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.