ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಥಿ ಉಪನ್ಯಾಸಕರ ಪ್ರತಿಭಟನೆ

Last Updated 5 ಜನವರಿ 2022, 4:40 IST
ಅಕ್ಷರ ಗಾತ್ರ

ಬೀದರ್: ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಾಗೂ ನಾಲ್ಕು ವರ್ಷದ ಪದವಿಯ ಧಿಡೀರ್ ಹೇರಿಕೆ ವಿರೋಧಿಸಿ ನಗರದಲ್ಲಿ ಮಂಗಳವಾರ ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟುಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪದವಿಯ ಪ್ರಥಮ ವರ್ಷದ ತರಗತಿಗಳು ಆರಂಭವಾಗಿಲ್ಲ, ಎರಡು ತಿಂಗಳು ಕಳೆದರೂ ಪಠ್ಯಕ್ರಮ ಸಿದ್ಧಗೊಂಡಿಲ್ಲ.
ಕಾಲೇಜುಗಳಲ್ಲಿ ಬೋಧಕರ ಕೊರತೆ ಇದೆ. ಪಾಠ ಮಾಡಲು ಸಾಮಗ್ರಿಗಳ ಕೊರತೆ ಎದುರಗಾಗಿದೆ. ಪದವಿಯನ್ನು ಒಂದು ವರ್ಷ ವಿಸ್ತರಿಸಿರುವುದು ಹಲವು ಗೊಂದಲಗಳನ್ನು ಸೃಷ್ಟಿಸಿದೆ ಎಂದು ಎಐಡಿಎಸ್‍ಒ ಬೀದರ್‌ ಜಿಲ್ಲೆಯ ಸಹ ಸಂಚಾಲಕ ತುಳಜಾರಾಮ ಎನ್.ಕೆ. ಆಕ್ರೋಶ ವ್ಯಕ್ತಪಡಿಸಿದರು.

ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷೆ ಸೀಮಾ ದೇಶಪಾಂಡೆ, ಅತಿಥಿ ಉಪನ್ಯಾಸಕ ಅನಿಲಕುಮಾರ ಸಿಂಧೆ ಮಾತನಾಡಿದರು,

ಅತಿಥಿ ಉಪನ್ಯಾಸಕರಾದ ಬಾಲಜಿ, ಕಲ್ಮೇಶ, ದೇವರಾಜ ಪಾಟೀಲ ಪಂಡಿತ್ ಹಾಗಾಊ ವಿದ್ಯಾರ್ಥಿಗಳಾದ ಶಕಿಲ್, ಸತಿಶ್, ಅಕ್ಷತಾ, ಕಾವೇರಿ, ಜಯವರ್ಧನ್ ಅವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT