ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಶ್ರದ್ಧಾ, ಭಕ್ತಿಯಿಂದ ಹನುಮ ಜಯಂತಿ

Published 24 ಏಪ್ರಿಲ್ 2024, 4:42 IST
Last Updated 24 ಏಪ್ರಿಲ್ 2024, 4:42 IST
ಅಕ್ಷರ ಗಾತ್ರ

ಬೀದರ್‌: ನಗರದ ವಿವಿಧ ಕಡೆಗಳಲ್ಲಿ ಮಂಗಳವಾರ ಹನುಮ ಜಯಂತಿಯನ್ನು ಸಡಗರ, ಸಂಭ್ರಮ ಹಾಗೂ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ನಗರದ ಕೆಇಬಿಯಲ್ಲಿ ಹನುಮ ದೇವರ ಮೂರ್ತಿಗೆ ಹೂಗಳಿಂದ ವಿಶೇಷ ಅಲಂಕಾರ ಮಾಡಿ, ಆರತಿ ಬೆಳಗಿ ಪೂಜೆ ನೆರವೇರಿಸಲಾಯಿತು. ವಿವಿಧ ಕಡೆಗಳಿಂದ ಭಕ್ತರು ಬಂದು ಸರತಿ ಸಾಲಲ್ಲಿ ನಿಂತು ದರ್ಶನ ಪಡೆದರು. ಭಕ್ತರಿಗಾಗಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಗುಂಪಾ ರಿಂಗ್‌ರೋಡ್‌ ಸಮೀಪದ ಕಾಲಾ ಹನುಮಾನ, ಹೈದರಾಬಾದ್‌ ರಸ್ತೆ, ಜನವಾಡ ರಸ್ತೆಯ ಹನುಮ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ನಗರದ ರಾಂಪೂರೆ ಕಾಲೊನಿಯಲ್ಲೂ ವಿಶೇಷ ಪೂಜೆ, ಪುನಸ್ಕಾರ ನಡೆದವು. ಮಾಜಿಶಾಸಕ ಅಶೋಕ ಖೇಣಿ ಅವರು ದೇವರ ದರ್ಶನ ಪಡೆದರು. ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಚಂದ್ರಶೇಖರ್ ಚನಶಟ್ಟಿ, ಧನರಾಜ ಹಂಗರಗಿ ಮತ್ತಿತರರು ಹಾಜರಿದ್ದರು.

ಬೀದರ್‌ನ ರಾಂಪೂರೆ ಕಾಲೊನಿಯ ಹನುಮಾನ ದೇವಸ್ಥಾನಕ್ಕೆ ಮಾಜಿಶಾಸಕ ಅಶೋಕ ಖೇಣಿ ಭೇಟಿ ನೀಡಿ ದರ್ಶನ ಪಡೆದರು
ಬೀದರ್‌ನ ರಾಂಪೂರೆ ಕಾಲೊನಿಯ ಹನುಮಾನ ದೇವಸ್ಥಾನಕ್ಕೆ ಮಾಜಿಶಾಸಕ ಅಶೋಕ ಖೇಣಿ ಭೇಟಿ ನೀಡಿ ದರ್ಶನ ಪಡೆದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT