ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ತಪಾಸಣೆ ಶಿಬಿರ

Last Updated 8 ಏಪ್ರಿಲ್ 2022, 12:24 IST
ಅಕ್ಷರ ಗಾತ್ರ

ಮುಚಳಂಬ(ಹುಲಸೂರ): ‘ಉತ್ತಮ ಆಹಾರ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ವಿದ್ಯಾರ್ಥಿಗಳು ಪೌಷ್ಟಿಕ ಆಹಾರ ಸೇವಿಸಬೇಕು’ ಎಂದು ಉಪನ್ಯಾಸಕ ನರಸಿಂಗ ಗದಲೆಗಾಂವ ಸಲಹೆ ನೀಡಿದರು.

ವಿಶ್ವ ಆರೋಗ್ಯ ದಿನದ ಪ್ರಯುಕ್ತ ತಾಲ್ಲೂಕಿನ ಮುಚಳಂಬ ಗ್ರಾಮದ ನಾಗಭೂಷಣ ಮಠದ ಆವರಣದಲ್ಲಿ ಸೋಶಿಯಲ್‌ ಇಕ್ವಲಿಟಿ ಫ್ರಂಟ್‌ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ಸಂಘಟನೆಯ ಅಧ್ಯಕ್ಷ ಆಕಾಶ ಖಂಡಾಳೆ ಮಾತನಾಡಿ,‘ವಿದ್ಯಾರ್ಥಿಗಳು ಆರೋಗ್ಯದ ಕಡೆ ಗಮನ ಹರಿಸಬೇಕು. ಆರೋಗ್ಯವಿದ್ದರೆ ಮಾತ್ರ ಏನಾದರು ಸಾಧಿಸಬಹುದು’ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲಾಶ್ರೀ ರವಿಂದ್ರ ಮೇತ್ರೆ ಮಾತನಾಡಿ,‘ಆರೋಗ್ಯ ಉಳಿದರೆ ಮಾತ್ರ ನಾವು ಶಿಕ್ಷಣ ಪಡೆಯಲು ಸಾಧ್ಯ. ಆದ ಕಾರಣ ವಿದ್ಯಾರ್ಥಿಗಳು ಪರೀಕ್ಷೆ ಸಂದರ್ಭದಲ್ಲಿ ಆರೋಗ್ಯದ ಕಡೆ ಗಮನಹರಿಸಬೇಕು’ ಎಂದರು.

ವೈದ್ಯ ಡಾ.ಮಹಾದೇವ ಪಾಟೀಲ ಹಾಗೂ ಕಾಂಗ್ರೆಸ್ ಪಕ್ಷದ ಪ್ರಮುಖ ಮನೋಜ್‌ ಮಾಸೇಟ್ಟೆ ಮಾತನಾಡಿದರು.

ಡಿಎಚ್‌ಒ ರತಿಕಾಂತ ಸ್ವಾಮಿ, ತಹಶೀಲ್ದಾರ್‌ ಶಿವಾನಂದ ಮೇತ್ರೆ, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಮಹಾದೇವ ಜಮ್ಮು, ಡಾ. ಸಂದೀಪ್ ಬಿರಾದಾರ ಭೇಟಿ ನೀಡಿದರು.

ಬಿಜೆಪಿಯ ಮಹಾದೇವ ಕರಬಶೇಟ್ಟೆ, ನವಾಜ ಖುರೇಷಿ, ಸಂದೀಪ್ ಪಾಟೀಲ, ಅಜಿತ್ ಸೂರ್ಯವಂಶಿ, ಬಲಭೀಮ ವಾಂಖೇಡೆ ಹಾಗೂ ರಾಜಶೇಖರ ಜಾಂತೆ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT