ಶನಿವಾರ, ಜೂನ್ 19, 2021
21 °C

ಕರ್ತವ್ಯನಿರತ ಪೊಲೀಸರಿಗೆ ಸಿರಿಧಾನ್ಯ ಗಂಜಿ ವಿತರಿಸಿದ ಟ್ರಸ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ನಗರದ ವಚನ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ನೀರು ಹಾಗೂ ಸಿರಿಧಾನ್ಯ ಗಂಜಿ ವಿತರಿಸಲಾಯಿತು.

ವಚನ ಚಾರಿಟೆಬಲ್ ಅಧ್ಯಕ್ಷ ಶಿವಕುಮಾರ ಸಾಲಿ ಮತ್ತು ಸದಸ್ಯರು ನಗರದ ನೌಬಾದ್ ಶಿವನಗರ, ಮಡಿವಾಳ ವೃತ್ತ, ರೋಟರಿ ವೃತ್ತ, ಸಿದ್ಧಾರ್ಥ ಕಾಲೇಜು, ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ, ಚೌಬಾರಾ, ಗವಾನ್ ವೃತ್ತ, ಶಾಪುರ ಗೇಟ್, ಮೈಲೂರ ಕ್ರಾಸ್, ಗಾಂಧಿ ಗಂಜ್, ಗುಂಪಾ ರಿಂಗ್ ರೋಡ್, ತೆಲಂಗಾಣ ಗಡಿ ಸೇರಿದಂತೆ ವಿವಿಧೆಡೆ ಕರ್ತವ್ಯದಲ್ಲಿ ನಿರತರಾದ ಪೊಲೀಸ್ ಸಿಬ್ಬಂದಿಗೆ ಶುದ್ಧ ಕುಡಿಯುವ ನೀರು ಹಾಗೂ ಸಿರಿಧಾನ್ಯ ಗಂಜಿ ವಿತರಿಸಿದರು.

‘ವೈದ್ಯರು ಹಾಗೂ ಪೊಲೀಸರು ಜನರ ರಕ್ಷಣೆಯಲ್ಲಿ ತಮ್ಮ ಜೀವನದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಅಂತವರನ್ನು ಸಮಾಜ ಗುರುತಿಸಿ ಬೆನ್ನು ತಟ್ಟಬೇಕಾಗಿದೆ’ ಎಂದು ವೀರಪ್ಪ ಜೀರಗೆ, ಜಗನ್ನಾಥ ಶಿವಯೋಗಿ, ಸಂಗಾರಡ್ಡಿ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.