ತಾಲ್ಲೂಕಿನ ಎಲ್ಲ ಕಂದಾಯ ನಿರೀಕ್ಷರಿಗೆ ಮಳೆ ಹಾನಿ ಕುರಿತು ತಕ್ಷಣ ವರದಿ ಕೊಡಲು ಸೂಚನೆ ನೀಡಲಾಗಿದೆ. ಇಲ್ಲಿಯ ತನಕ ಯಾವುದೇ ಮನೆ ಪೂರ್ಣವಾಗಿ ಬಿದ್ದಿಲ್ಲ. ಹಳೆ ಮನೆ ಗೋಡೆ ಭಾಗಶಃ ಬಿದ್ದಿವೆ. ಈ ಕುರಿತು ವಾಸ್ತವ ಮಾಹಿತಿ ಸಂಗ್ರಹಿಸಲಾಗುತ್ತಿದೆ. ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಮಾಂಜ್ರಾ ನದಿ ಪಾತ್ರದ ಗ್ರಾಮಗಳ ರೈತರು, ಜನ ಜಾನುವಾರುಗಳಿಗೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ತಹಶೀಲ್ದಾರ್ ಶಿವಾನಂದ ಮೇತ್ರೆ ತಿಳಿಸಿದರು.