ಹುಮನಾಬಾದ್: ತಾಲ್ಲೂಕಿನ ಹಳ್ಳಿಖೇಡ(ಕೆ) ಗ್ರಾಮದಲ್ಲಿ ಭಾನುವಾರ ಕೈಲಾಸನಾಥೇಶ್ವರ ದೇವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ನಡೆಯಿತು.

80 ಅಡಿ ಎತ್ತರದ ಶಿವನ ಮೂರ್ತಿ ಇರುವುದು ಈ ದೇವಾಲಯದ ವಿಶೇಷ.ಮುಂಜಾನೆ ದೇವರಿಗೆ ವಿಶೇಷ ಅಭಿಷೇಕ ಪೂಜೆ ನಡೆಯಿತು. ಬಳಿಕ ಗ್ರಾಮದ ಮುಖ್ಯ ಬೀದಿಗಳಲ್ಲಿ ದೇವರ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಡೊಳ್ಳು ಕುಣಿತ, ಲಂಬಾಣಿ ನೃತ್ಯ, ಕೋಲಾಟ, ವಾದ್ಯವೃಂದ, 101 ಕಳಸ ಹೊತ್ತ ಮಹಿಳೆಯರು ಮೆರವಣಿಗೆಗೆ ಮೆರುಗು ನೀಡಿದರು. ಪಲ್ಲಕ್ಕಿಗೆ ಗ್ರಾಮಸ್ಥರು ವಿಶೇಷ ಪೂಜೆ ಸಲ್ಲಿಸಿದರು.

ಗ್ರಾಮದ ಮನೆಗಳ ಮುಂದಿನ ರಂಗೋಲಿ ಗಮನ ಸೆಳೆಯಿತು. ಮೆರವಣಿಗೆಯುದ್ದಕ್ಕೂ ಭಕ್ತರು ಹರ ಹರ ಮಹಾದೇವ, ಶಂಭೋ ಶಂಕರ, ಜೈ ಭೋಲೆನಾಥ್ ಎಂಬ ಜಯಘೋಷದೊಂದಿಗೆ ಭಜನೆ ಮಾಡುತ್ತಾ ಸಾಗಿದರು.ತಾಲ್ಲೂಕಿನ ಹಲವು ಗ್ರಾಮಗಳ ಭಕ್ತರು ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ಸಂಜೆ ದೇವಾಲಯದಲ್ಲಿ ಸಾಮೂಹಿಕ ಲಿಂಗಪೂಜೆ ಕಾರ್ಯಕ್ರಮ, ರಾತ್ರಿ ವಿವಿಧ ಸಂಗೀತ ಕಲಾವಿದರಿಂದ ಭಜನೆ ನಡೆಯಿತು. ಜಾತ್ರೋತ್ಸವ ನಿಮಿತ್ತ ಗ್ರಾಮದೆಲ್ಲೆಡೆ ಹಬ್ಬದ ವಾತಾವರಣ ಕಂಡು ಬಂತು.

ಶಿವರಾತ್ರಿ ಹಬ್ಬದ ನಿಮಿತ್ತ ಶಾಸಕ ಡಾ. ಸಿದ್ದಲಿಂಗಪ್ಪ ಪಾಟೀಲ, ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ ಅವರು ತಾಲ್ಲೂಕಿನ ಹಳ್ಳಿಖೇಡ್ ಕೆ. ಗ್ರಾಮದ ಕೈಲಾಸನಾಥೇಶ್ವರ ದೇವಸ್ಥಾನಕ್ಕೆ ಭೇಟಿ ದೇವರ ದರ್ಶನ ಪಡೆದರು.

ಮೋಹನ ವಾರದ, ಸುಭಾಷ್ ವಾರದ, ಸುಭಾಷ ಚಿಲಶೆಟ್ಟಿ, ಅಣ್ಣಾರಾವ್ ರಟಕಲ್, ಉದಯಕುಮಾರ ವಾರದ, ಸಂದೀಪ ವಾರದ, ಇಂದ್ರಕರ್ಣ ಬಿರಾದಾರ, ಭಕ್ತರಾಜ ಚಿತ್ತಾಪುರೆ, ಮಲ್ಲಿಕಾರ್ಜುನ ತಟಪಟ್ಟಿ, ಮಹೇಶ್ ಚಿಲಶಟ್ಟಿ, ಪ್ರಕಾಶ್ ಬಾವಗಿ,ವಿವೇಕಾನಂದರ ಕೋರಿ, ಪ್ರಶಾಂತ್ ಹೊನ್ನಳ್ಳಿ, ಸಿದ್ದು ಇಂಡಿ, ಸಾಗರ್ ಭೂರಿ, ಅಂಬರೀಷ್ ಬೇಲೂರೆ, ಅನೀಲ ಭಂಡಿ, ರಾಚಣ್ಣ , ಆನಂದ ಲಕ್ಕಾ, ವೀರೇಶ್ ಗಾದಾ, ಶ್ರೀನಾಥ್ ಕೋರಿ ಸೇರಿದಂತೆ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.