ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧುಮನಸೂರ ತಾಂಡದ ಮಾದರಿ ಶಾಲೆ; ಗುಣಮಟ್ಟದ ಕಲಿಕೆಗೆ ವಿಶಿಷ್ಟ ಕ್ರಮ

ಶಿಕ್ಷಕರ ಉತ್ಸಾಹ– ಇಲಾಖೆ ಪ್ರೋತ್ಸಾಹ
Last Updated 3 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಹುಮನಾಬಾದ್: ತಾಲ್ಲೂಕಿನ ಧುಮನಸೂರ ಗ್ರಾಮದ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಧುಮನಸೂರ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿನೂತನ ಹಾಗೂ ವಿಶಿಷ್ಟ ಕಾರ್ಯಕ್ರಮಗಳ ಮೂಲಕ ನಿಜವಾದ ಅರ್ಥದಲ್ಲಿ ಮಾದರಿ ಶಾಲೆಯಾಗಿ ಗುರುತಿಸಿಕೊಂಡಿದೆ.

ವಿಶಾಲವಾದ ಪ್ರದೇಶದಲ್ಲಿರುವ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ ಒಟ್ಟು 40 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಒಟ್ಟು 5 ಕೋಣೆಗಳಿವೆ. ಶಾಲೆಯ ಆವರಣದಲ್ಲಿ ಸಸಿಗಳನ್ನು ಬೆಳೆಸಿದ್ದು, ಇಡೀ ವಾತಾವರಣ ಹಸಿರುಮಯವಾಗಿ ಆಕರ್ಷಕವಾಗಿದೆ.

ಇಲ್ಲಿನ ಶಿಕ್ಷಕಿಯರು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಪರಿಸರ ಸಂರಕ್ಷಣೆ, ಕಲೆ, ಸಾಹಿತ್ಯ, ಸಂಸ್ಕೃತಿ, ಆಚರಣೆಗಳ ಕುರಿತು ಜಾಗೃತಿ ಮೂಡಿಸಲಾಗುವುದು ಎನ್ನುತ್ತಾರೆ ಶಿಕ್ಷಕರು.

ಶಾಲೆಯ ಮಕ್ಕಳಿಗೆ 1ನೇ ತರಗತಿಯಿಂದ ನಲಿಕಲಿ ಮೂಲಕ ಶಿಕ್ಷಣ, ಶಾಲೆಯಲ್ಲಿ ಸುಮಾರು 200 ಪುಸ್ತಕಗಳ ಕಿರು ಗ್ರಂಥಾಲಯ ವ್ಯವಸ್ಥೆ ಸಹ ಇದೆ. ವಿವಿಧ ಸಾಂಸ್ಕೃತಿಕ ಚಟುವಟಿಕೆ, ಪೂರ್ವ ಪ್ರಾಥಮಿಕ, ದೈಹಿಕ ಮತ್ತು ಯೋಗ ಶಿಕ್ಷಣ, ಪಾಠ ಬೋಧನೆಗೆ ಸುಸಜ್ಜಿತ ಕಟ್ಟಡ ಇದೆ.

ಆಟದ ಮೈದಾನ ಇಲ್ಲ: ಮಕ್ಕಳ ಕ್ರೀಡಾ ಚಟುವಟಿಕೆಗಾಗಿ ಆಟದ ಮೈದಾನ ಇಲ್ಲ, ಇದ್ದಷ್ಟು ಜಾಗದಲ್ಲಿ ಮಕ್ಕಳನ್ನು ಆಡಿಸಲಾಗುತ್ತಿದೆ. ಶಾಲೆಯ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗಾಗಿ ಪ್ರತೇಕ ಶೌಚಾಲಯ ಇದೆ. ಶಾಲೆಯಲ್ಲಿಯೇ ಕೊಳವೆ ಬಾವಿ ಇದ್ದರು ಕೂಡ ಕಳೆದ ಒಂದು ವರ್ಷದಿಂದ ಅದು ಕೆಟ್ಟು ಹೋಗಿದೆ. ಗ್ರಾಮ ಪಂಚಾಯಿತಿ ಅವರು ಶಾಲೆಗೆ ನಳದ ಸಂಪರ್ಕ ನೀಡಿದ್ದು, 2 ದಿನಕ್ಕೆ ಒಂದು ಬಾರಿ ನೀರು ಬರುತ್ತದೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಮನೆ ಮನೆಗೆ ತೆರಳಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮುಖ್ಯಗುರು ಸಂಗೀತಾ ಪಾಟೀಲ ಹೇಳಿದರು.

**

ಪ್ರಾಥಮಿಕ ಹಂತದಿಂದ ನಲಿಕಲಿ ಮೂಲಕ ಶಿಕ್ಷಣ ನೀಡಲಾಗುತ್ತಿದೆ.ಮಕ್ಕಳ ಬುದ್ದಿ ಮಟ್ಟ ಹೆಚ್ಚಿಸಲು ಶಾಲೆಯಲ್ಲಿ ಕಿರು ಗ್ರಂಥಾಲಯ ವ್ಯವಸ್ಥೆ ಮಾಡಲಾಗಿದೆ.
- ಸೋನಿ ಬಿರಾದರ್ ಶಿಕ್ಷಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT