ಈಚೆಗೆ ಅಧಿಕ ಮರಳು ತುಂಬಿರುವ ಸುಮಾರು 10 ವಾಹನಗಳ ವಿರುದ್ಧ ಕ್ರಮ ಜರುಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಓವರ್ ಲೋಡ್ ವಾಹನಗಳು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುವುದು
–ಮಡೋಳಪ್ಪ, ಡಿವೈಎಸ್ಪಿ ಹುಮನಾಬಾದ್
ಮರಳು ಅಕ್ರಮ ಸಾಗಣಿ ಆರೋಪ ಇದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ಮಾಡಿ ಕ್ರಮ ಕೈಗೊಳ್ಳಲಾಗುವುದು
–ಅಂಜುಂ ತಬಸುಮ್, ತಹಶೀಲ್ದಾರ್
ಕಳೆದ ಮೂರು ತಿಂಗಳಲ್ಲಿ 15 ಓವರ್ ಲೋಡ್ ಮರಳು ವಾಹನಗಳ ಮೇಲೆ ಕ್ರಮ ಕೈಗೊಂಡು ಸುಮಾರು ₹5.75 ಲಕ್ಷ ದಂಡ ವಿಧಿಸಲಾಗಿದೆ. ವಾಹನಗಳ ಪರಿಶೀಲನೆ ನಡೆಸಲಾಗುತ್ತಿದೆ. ಮುಂದೆಯೂ ಕ್ರಮ ಕೈಗೊಳ್ಳಲಾಗುವುದು