ಬೀದರ್: ‘ಶಕ್ತಿ ದೇವತೆಗಳ ಆರಾಧಣೆಯಿಂದ ವ್ಯಕ್ತಿಯ ಆತ್ಮಬಲ ಹೆಚ್ಚುತ್ತದೆ. ದೇವತೆಗಳ ದಿವ್ಯ ಶಕ್ತಿಯ ಪರಿಚಯವೂ ಆಗುತ್ತದೆ’ ಎಂದು ಬ್ರಹ್ಮಕುಮಾರಿ ರಾಜಯೋಗ ಕೇಂದ್ರ ಪಾವನಧಾಮದ ಸಂಚಾಲಕಿ ಪ್ರತಿಮಾ ಬಹೆನ್ಜಿ ನುಡಿದರು.

ನಗರದ ಜನವಾಡ ರಸ್ತೆಯಲ್ಲಿರುವ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗ ಕೇಂದ್ರ ಪಾವನಧಾಮ ಆವರಣದಲ್ಲಿ ನವದೇವಿಯರ ದರುಶನ ಹಾಗೂ ಅವರ ದಿವ್ಯ ಶಕ್ತಿಯ ಪರಿಚಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಧೃಢವಾದ ಶಕ್ತಿಯನ್ನು ದೇವಿ ವೈಷ್ಣವಿ ನೀಡಿದರೆ, ದೇವಿ ಸಂತೋಷಿ ನಮ್ಮೆಲ್ಲರನ್ನು ಸದಾ ಸಂತುಷ್ಟವಾಗಿಡುತ್ತಾಳೆ. ಪಾರ್ವತಿ ದೇವಿ ಭಕ್ತರ ಇಷ್ಟಾರ್ಥ ಪೂರೈಸುತ್ತಾಳೆ. ಪರೀಕ್ಷಕ ಶಕ್ತಿ ತುಂಬುವ ಗಾಯತ್ರಿ, ವಿದ್ಯೆ ದಯಪಾಲಿಸುವ ಸರಸ್ವತಿ, ಒಂದು ಕೈಯಿಂದ ಧನ ಸಂಪತ್ತು, ಮತ್ತೊಂದು ಕೈಯಿಂದ ಎಲ್ಲರ ಮನಸ್ಸು ಕಮಲದಂತೆ ಅರಳಿಸುವ ಶಕ್ತಿ ಲಕ್ಷ್ಮೀದೇವಿಗೆ ಇದೆ’ ಎಂದರು.

‘ಜಗದಂಬಾ ಸರ್ವರ ಸಂಕಷ್ಟಗಳನ್ನು ದೂರ ಮಾಡುತ್ತಾಳೆ. ದುರ್ಗೆ ದುಷ್ಟರ, ದುರ್ಗುಣಗಳ ಸಂಹಾರ ಮಾಡುತ್ತಾಳೆ. ಬ್ರಹ್ಮಕುಮಾರಿ ಜ್ಞಾನಗಂಗಾ ಆತ್ಮವನ್ನು ಪರಮಾತ್ಮನೆಡೆಗೆ ಸಾಗಲು ಜ್ಞಾನಾಮೃತವನ್ನು ಹರಿಸುತ್ತಾಳೆ. ಒಟ್ಟಾರೆ ಲಕ್ಷ್ಮೀಯ ಹಸ್ತ, ಸರಸ್ವತಿಯ ಸಹಕಾರ ಹಾಗೂ ಗಣಪತಿಯ ವಾಸವಿದ್ದರೆ ಎಲ್ಲವೂ ಸಾಧ್ಯ’ ಎಂದರು.

ಬಿ.ಕೆ ಮಂಗಲಾ, ಬಿ.ಕೆ ಗುರುದೇವಿ, ಬಿ.ಕೆ. ವಾಣಿ ಹಾಗೂ ಬಿ.ಕೆ ಶಿಲ್ಪಾ ಅವರು ನವದೇವಿಯರಿಗೆ ಮಾಲಾರ್ಪಣೆ ಮಾಡಿದರು.

ಆರೋಗ್ಯ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಗಂಡಪ್ಪ ಚಿಲ್ಲರ್ಗಿ, ಬ್ರಹ್ಮಕುಮಾರಿ ಪಾವನಧಾಮದ ಪ್ರವರ್ತಕ ಬಿ.ಕೆ ಪ್ರಭಾಕರ್ ಕೋರವಾರ, ಬಿ.ಕೆ ಮಂಗಲಾ, ಬಿ.ಕೆ ವಿಜಯಲಕ್ಷ್ಮಿ, ಬಿ.ಕೆ ವಾಣಿ ಬಹೆನ್ ಸಾಮೂಹಿಕವಾಗಿ ದೀಪ ಬೆಳಗಿಸಿದರು.

ಭವನೇಶ್ವರಿ ಶಿವಕುಮಾರ ಸ್ವಾಮಿ ಸ್ವಾಗತಿಸಿದರು. ವಿನಯಾ, ಅನುಷ್ಕಾ, ಸೌಮ್ಯಕಾ, ಪ್ರಣಿತಿ, ಪ್ರೀತಿ ಸ್ವಾಮಿ, ಆರ್ಯಾ, ಸಂಚಿತಾ, ಅರ್ಪಿತಾ, ಪ್ರವಿಣ್ಯಾ ರವಿಕುಮಾರ ಶಂಕರಶೆಟ್ಟಿ ನೃತ್ಯ ಪ್ರದರ್ಶಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.