ಮಂಗಳವಾರ, ಆಗಸ್ಟ್ 3, 2021
28 °C

ಔರಾದ್: ಅಂತರರಾಜ್ಯ ಬಸ್ ಸೇವೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಔರಾದ್: ಲಾಕ್‍ಡೌನ್ ಸಡಿಲಿಕೆ ಆದ ಕಾರಣ ಎರಡು ತಿಂಗಳಿನಿಂದ ಸ್ಥಗಿತವಾದ ಅಂತರರಾಜ್ಯ ಬಸ್ ಸೇವೆ ಸೋಮವಾರ ಪುನರಾರಂಭವಾಗಿದೆ.

‘ಔರಾದ್ ಘಟಕದಿಂದ ಹೈದರಾಬಾದ್, ದೇಗಲೂರ, ಉದಗಿರ್, ಲಾತೂರ್ ಹಾಗೂ ರಾಜ್ಯದ ಬೆಳಗಾವಿ, ಬೆಂಗಳೂರು, ಬಳ್ಳಾರಿ ಸೇರಿದಂತೆ ಮೊದಲ ದಿನ 27 ಕಡೆ ಬಸ್ ಓಡಿಸಲಾಗಿದೆ. ಪ್ರಯಾಣಿಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಕೋವಿಡ್ ನಿಯಮಾನುಸಾರ ಬಸ್‍ನಲ್ಲಿ ಶೇ 50 ಸೀಟ್ ಮಾತ್ರ ತುಂಬಲಾಗುತ್ತಿದೆ’ ಎಂದು ಇಲ್ಲಿಯ ಘಟಕ ವ್ಯವಸ್ಥಾಪಕ ಮಹಮ್ಮದ್ ನಯೀಮ್ ತಿಳಿಸಿದ್ದಾರೆ.

ಲಾಕ್‍ಡೌನ್ ತೆರವಿನಿಂದ ಜನ ಕೊಂಚ ನೆಮ್ಮದಿ ಬಿಟ್ಟಿದ್ದಾರೆ. ಸಂಜೆ 5 ಗಂಟೆಗೆ ತನಕ ಅಂಗಡಿಗಳು ತೆರೆಯಲು ಅವಕಾಶ ಇರುವುದರಿಂದ ಗಡಿಬಿಡಿ ಕಮ್ಮಿಯಾಗಿದೆ. ವ್ಯಾಪಾರಿಗಳು ಮಾಸ್ಕ್ ಬಳಸುತ್ತಿದ್ದು, ಜನರಿಗೂ ಕೂಡ ಬಳಸಲು ತಿಳಿಸುತ್ತಿದ್ದಾರೆ. ಈ ನಡುವೆ ಜನರಲ್ಲಿ ಇನ್ನು ಕೋವಿಡ್ ಭಯ ಇದ್ದು ಹೊರ ಬರಲು ಹೆದರುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು