ಶುಕ್ರವಾರ, ಫೆಬ್ರವರಿ 3, 2023
18 °C

ಬೀದರ್ ಉತ್ಸವ ಸ್ಮರಣ ಸಂಚಿಕೆಗೆ ಲೇಖನಗಳ ಆಹ್ವಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜನವರಿಯಲ್ಲಿ ನಡೆಯಲಿರುವ ಬೀದರ್ ಉತ್ಸವ-2023ರ ಸವಿನೆನಪಿಗಾಗಿ ಹೊರತರಲುದ್ದೇಶಿಸಿರುವ ಸ್ಮರಣ ಸಂಚಿಕೆಗೆ ಲೇಖಕರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಲೇಖಕರು ನುಡಿ ಅಥವಾ ಯುನಿಕೋಡ್‍ನಲ್ಲಿ ಬೆರಳಚ್ಚು ಮಾಡಿದ 1,500 ಪದಗಳ ಮಿತಿಯೊಳಗಿನ ಲೇಖನಗಳನ್ನು ಡಿಸೆಂಬರ್16ರೊಳಗೆ ಇ-ವಿಳಾಸ: bidarutsavsouvenir@gmail.comಗೆ ಕಳುಹಿಸಲು ಕೋರಲಾಗಿದೆ.

ವಿಷಯಗಳು : ಬೀದರ್ ಐತಿಹಾಸಿಕ, ಸಾಂಸ್ಕೃತಿಕ ಚರಿತ್ರೆಯಲ್ಲಿ ರಾಜಮನೆತನಗಳು, ಶಾಸನ, ಸೌಹಾರ್ದತೆ ನೆಲೆಗಳು, ಐತಿಹ್ಯ, ಧಾರ್ಮಿಕ ಕೇಂದ್ರಗಳು ಇತ್ಯಾದಿ ಕುರಿತ ಲೇಖನಗಳು, ಪ್ರವಾಸಿ ತಾಣಗಳ ಪರಿಚಯದಲ್ಲಿ ಕೋಟೆ, ಶರಣರ ಸ್ಮಾರಕಗಳು, ಪಾಪನಾಶ, ಗುರು ನಾನಕ ಝಿರಾ, ನರಸಿಂಹ ಝಿರಾ, ಇತ್ಯಾದಿ ಲೇಖನಗಳು, ಬೀದರ್ ಅಭಿವೃದ್ಧಿ ಕೇಂದ್ರಿತ ಲೇಖನಗಳಲ್ಲಿ ಕೈಗಾರಿಕೋದ್ಯಮ, ಸಮಾಜ ಕಲ್ಯಾಣ, ರೇಷ್ಷೆ ಇತ್ಯಾದಿ, ಬೀದರ್ ಜಿಲ್ಲೆಯ ಕಲೆ, ಸಾಹಿತ್ಯ, ಸಂಗೀತ, ಇತ್ಯಾದಿ ಕುರಿತ ಲೇಖನಗಳು

ಜಿಲ್ಲೆಯ ವೈಶಿಷ್ಠ್ಯತೆಗಳಲ್ಲಿ ಜಿಲ್ಲೆಯ ಆಹಾರ ಪದ್ಧದತಿ, ಹಣ್ಣು, ಪಾರಂಪರಿಕ ಆಭರಣ, ಉಡುಗೆ ತೊಡುಗೆ, ಪುರಾತನ ಭೂಕಾಲುವೆ, ವಿಮಾನ ನಿಲ್ದಾಣ, ಪ್ರಾಣಿಗಳ ಕುರಿತು ಲೇಖನಗಳನ್ನು ಕಳಿಸಬಹುದಾಗಿದೆ.

ಲೇಖನಗಳು ಈ ಹಿಂದೆ ಎಲ್ಲಿಯೂ ಪ್ರಕಟವಾಗಿರಬಾರದು. ಲೇಖನಗಳ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮವಾಗಿದೆ ಎಂದು ಸ್ಮರಣ ಸಂಚಿಕೆ ಸಂಪಾದಕ ಮಂಡಳಿಯ ಸುರೇಶ ಚನಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು