ಮಂಗಳವಾರ, ಮಾರ್ಚ್ 21, 2023
21 °C
ಜಿ.ಎನ್. ಫೌಂಡೇಷನ್ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿಕೆ

ಉದ್ಯೋಗ ಮೇಳ: 1,500 ಮಂದಿಗೆ ಉದ್ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಬೀದರ್ ಉತ್ಸವದ ಪ್ರಯುಕ್ತ ಜಿಲ್ಲಾ ಆಡಳಿತ ಹಾಗೂ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಉದ್ಯೋಗ ಮೇಳದಲ್ಲಿ 1,500 ನಿರುದ್ಯೋಗಿ ಅಭ್ಯರ್ಥಿಗಳಿಗೆ ಉದ್ಯೋಗ ದೊರಕಿದೆ ಎಂದು ಫೌಂಡೇಷನ್ ಅಧ್ಯಕ್ಷರೂ ಆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಸೂರ್ಯಕಾಂತ ನಾಗಮಾರಪಳ್ಳಿ ತಿಳಿಸಿದ್ದಾರೆ.

ಮೇಳದಲ್ಲಿ ದೇಶದ ಹೆಸರಾಂತ ಕಂಪನಿಗಳು ಭಾಗವಹಿಸಿದ್ದವು. ಜಿಲ್ಲೆಯ ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಿರುವುದು ಸಂತಸ ಉಂಟು ಮಾಡಿದೆ ಎಂದು ಹೇಳಿದ್ದಾರೆ.
ಫೌಂಡೇಷನ್‍ನಿಂದ ಹಮ್ಮಿಕೊಂಡಿದ್ದ ಹೆಲಿಕಾಪ್ಟರ್ ಸಂಚಾರ ಉತ್ಸವವು ಜನಸಾಮಾನ್ಯರೂ ಹೆಲಿಕಾಪ್ಟರ್ ಸಂಚಾರದ ಆನಂದ ಅನುಭವಿಸಲು ವೇದಿಕೆ ಒದಗಿಸಿತ್ತು. ರೈತ ಮುಖಂಡರು, ಮಹಿಳೆಯರು ಹಾಗೂ ಮಕ್ಕಳು ಹೆಲಿಕಾಪ್ಟರ್‍ನಲ್ಲಿ ಸಂಚರಿಸಿ ಸಂತಸಪಟ್ಟರು. ಇದು ಉತ್ಸವದ ವೈಭವ ಹೆಚ್ಚಿಸಿತು ಎಂದು ತಿಳಿಸಿದ್ದಾರೆ.
ಬೀದರ್ ಉತ್ಸವಕ್ಕೆ ಹೆಸರಾಂತ ನಟರು, ಕಲಾವಿದರು ಆಗಮಿಸಿದ್ದರಿಂದ ಜಿಲ್ಲೆಯ ಕೀರ್ತಿ ಇತರೆಡೆಯೂ ಹರಡುವಂತಾಯಿತು. ಪ್ರವಾಸೋದ್ಯಮ ಬೆಳವಣಿಗೆಗೂ ಉತ್ಸವ ನೆರವಾಯಿತು ಎಂದು ಹೇಳಿದ್ದಾರೆ.
ಸನ್ಮಾನ: ಬೀದರ್ ಉತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದ ಪ್ರಯುಕ್ತ ಸೂರ್ಯಕಾಂತ ನಾಗಮಾರಪಳ್ಳಿ ಅವರು ನಗರದಲ್ಲಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕ ಕಿಶೋರಬಾಬು ಅವರನ್ನು ಶಾಲು ಹೊದಿಸಿ ಸನ್ಮಾನಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು