ಪಕ್ಷಿಗಳ ಜೀವ ಉಳಿಸುವ ಮಾನವೀಯತೆ
ಜೋಳದ ತೆನೆಗಳಿಗೆ ಔಷಧ ಸಿಂಪಡಿಸುವ ಮೂಲಕ ಪಕ್ಷಿ ಕಾಟ ತಡೆಗಟ್ಟಬಹುದು. ಆದರೆ ಇದರಿಂದ ಕಾಳು ತಿನ್ನುವ ಪಕ್ಷಿಗಳ ಜೀವಕ್ಕೆ ಅಪಾಯ ಉಂಟಾಗುತ್ತದೆ ಎಂಬ ಕಾರಣಕ್ಕೆ ರೈತರು ಆ ಮಾರ್ಗವನ್ನು ಅನುಸರಿಸುತ್ತಿಲ್ಲ.
‘ಪಕ್ಷಿಗಳ ಪ್ರಾಣವೂ ಮುಖ್ಯ. ಜೋಳದ ಕಾಳುಗಳನ್ನು ಸ್ವಲ್ಪ ಪ್ರಮಾಣದಲ್ಲಿ ತಿಂದರೆ ಏನು ಆಗುವುದಿಲ್ಲ. ಆದರೆ ಹಿಂಡು ಬಂದು ಎಲ್ಲ ಕಾಳುಗಳನ್ನು ತಿಂದು ಹಾಕಿದರೆ ಮಾತ್ರ ಸಮಸ್ಯೆ. ಹೀಗಾಗಿ ಔಷಧ ಬಳಕೆ ಮಾಡದೆ, ನಾವು ಸ್ವತಃ ಕಾವಲು ಕಾಯುತ್ತ ಪಕ್ಷಿಗಳನ್ನು ಓಡಿಸುತ್ತಿದ್ದೇವೆ’ ಎಂದು ಮೀರಖಲ ಗ್ರಾಮದ ರೈತ ಬಾಲಾಜಿ ಹೇಳಿದರು.
ಹಿಂಗಾರು ಹಂಗಾಮಿನ ಪ್ರಮುಖ ಫಸಲಾದ ಜೋಳ ಉತ್ತಮವಾಗಿ ಕೈಗೆ ಸಿಗಲು ಕೃಷಿ ಇಲಾಖೆ ಪರಿಣಾಮಕಾರಿ ಮಾರ್ಗದರ್ಶನ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.