ಕಮಲನಗರ: ಪಟ್ಟಣದಲ್ಲಿ ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ವತಿಯಿಂದ ಫೆ.1ರಂದು ನಡೆಯುವ ಬೃಹತ್ ಶೋಭಾಯಾತ್ರೆ ಮತ್ತು ಹಿಂದೂ ಸಮ್ಮೇಳನ ಕಾರ್ಯಕ್ರಮಕ್ಕೆ ಹಿಂದೂ ಬಾಂಧವರನ್ನು ಕರಪತ್ರ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.

ಸಮಿತಿಯ ಅಧ್ಯಕ್ಷ ಶಿವಾನಂದ ವಡ್ಡೆ ಮಾತನಾಡಿ, ‘ಫೆ. 1 ರಂದು ಹಿಂದೂ ಜಾಗೃತಿ ಅಭಿಯಾನದ ಪ್ರಯುಕ್ತ ಹಿಂದೂ ಸಮ್ಮೇಳನ ಆಯೋಜನೆ ಮಾಡಿದ್ದು, ಮಧ್ಯಾಹ್ನ 2 ಗಂಟೆಗೆ ಚನ್ನಬಸವ ಪಟ್ಟದ್ದೇವರ ಶಾಖಾ ಮಠದಿಂದ ಶೋಭಾಯಾತ್ರೆ ಆರಂಭಗೊಂಡು ಪ್ರಮುಖ ಬಡಾವಣೆಗಳ ಮೂಲಕ ಬಸವೇಶ್ವರ ವೃತ್ತ, ಅಲ್ಲಮಪ್ರಭು ವೃತ್ತದ ಮೂಲಕ ಚನ್ನಬಸವ ಪಟ್ಟದ್ದೇವರ ಪ್ರೌಢಶಾಲೆ ಆವರಣಕ್ಕೆ ಬಂದು ತಲುಪಲಿದೆ. ನಂತರ ಸಂಜೆ 5 ಕ್ಕೆ ವೇದಿಕೆ ಕಾರ್ಯಕ್ರಮಕ್ಕೆ ಶಿವಣಿ-ಹಲಬರ್ಗಾ ಮಠದ ಹಾವಗಿಲಿಂಗೇಶ್ವರ ಶಿವಾಚಾರ್ಯ, ಸೇವಾನಗರ ತಾಂಡಾದ ಶ್ರೀರಾಮ ಚೈತನ್ಯ ಮಹಾರಾಜ ಹಾಗೂ ದಿಕ್ಸೂಚಿ ಭಾಷಣವನ್ನು ಸಾಮಾಜಿಕ ಕಾರ್ಯಕರ್ತ ಬಾಗಲಕೋಟನ್ ಸುರೇಶ ಲಿಂಗಪ್ಪನವರು ಆಗಮಿಸುತ್ತಿದ್ದಾರೆ. ತಾಲ್ಲೂಕಿನ ಹಿಂದೂ ಬಾಂಧವರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಸಂಚಾಲಕ ಕಿರಣ ಮಾತನಾಡಿ, ‘ಹಿಂದೂ ಸಮ್ಮೇಳನ ಕೇವಲ ಒಂದು ಧಾರ್ಮಿಕ ಉತ್ಸವವಲ್ಲ. ಅದು ಸಮಾಜದ ಎಕತೆ, ಸಂಸ್ಕೃತಿ ಉಳಿವು ಮತ್ತು ಧಾರ್ಮಿಕ ಜಾಗೃತಿಯ ಪ್ರತೀಕವಾಗಿದೆ’ ಎಂದು ತಿಳಿಸಿದರು.

ಉಪಾಧ್ಯಕ್ಷ ಗುಂಡಪ್ಪ ದಾನಾ, ಕಾರ್ಯದರ್ಶಿ ಶಿವಕಾಂತ ಹಣಮಶೆಟ್ಟಿ, ಸುರೇಶ ಚಾಂಗುಣೆ, ಬಾಲಾಜಿ ತೆಲಂಗ, ಸಹಕಾರ್ಯದರ್ಶಿ ಶಿವಕುಮಾರ ಜುಲ್ಫೆ, ಸಂಯೋಜಕ ಸಂತೋಷ ಸೋಲಾಪುರೆ, ಸಹ ಸಂಯೋಜಕ ಪ್ರಶಾಂತ ಖಾನಾಪುರೆ, ಸದಸ್ಯ ವಿಶ್ವನಾಥ ಡೊಣಗಾಪುರೆ, ನಾಗೇಶ ಪತ್ರೆ, ಎಸ್.ವ್ಹಿ ಬಿರಾದಾರ, ಗಿರಿರಾಜ ಚಿಮ್ಮಾ ಹಾಗೂ ಇನ್ನಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.