ಜನವಾಡ: ಬೀದರ್ ತಾಲ್ಲೂಕಿನ ಕಪಲಾಪುರ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಪರಶುರಾಮ ಸಿದ್ಧಗೊಂಡ ಹಾಗೂ ಉಪಾಧ್ಯಕ್ಷರಾಗಿ ಸಂಜುಕುಮಾರ ಮಾಶೆಟ್ಟಿ ಆಯ್ಕೆಯಾಗಿದ್ದಾರೆ.
ಪಂಚಾಯಿತಿ ಕಚೇರಿಯಲ್ಲಿ ಈಚೆಗೆ ಜರುಗಿದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಅವಿರೋಧವಾಗಿ ನಡೆಯಿತು.
ಸದಸ್ಯರಾದ ವೈಜಿನಾಥ ಖೇಳಬಾ, ಸರಸ್ವತಿ ಸಂಗಪ್ಪ, ಶೋಭಾವತಿ ರವೀಂದ್ರ ರೆಡ್ಡಿ, ಚಿನ್ನಮ್ಮ ವಿಜಯಕುಮಾರ, ಅನುಸೂಯಾಬಾಯಿ ರಾಮಚಂದ್ರ, ಮೀನಾಕುಮಾರಿ ರಾಮಣ್ಣ, ಲಕ್ಷ್ಮಿ ಗೌತಮ, ಸಲೀಂ ಬೇಗಂ ರುಕ್ಮೊದ್ದಿನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.