ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನ್ನಡ ಸರ್ವ ಭಾಷೆಗಳ ತಾಯಿ’

Last Updated 5 ಡಿಸೆಂಬರ್ 2021, 5:57 IST
ಅಕ್ಷರ ಗಾತ್ರ

ಭಾಲ್ಕಿ: ಸುಮಾರು 2,500 ವರ್ಷಗಳ ಇತಿಹಾಸ ಹೊಂದಿರುವ ಕನ್ನಡವು ಎಲ್ಲ ಭಾಷೆಗಳ ತಾಯಿ ಬೇರು ಎಂದು ಉಡುಪಿಯ ಕನ್ನಡ ಉಪನ್ಯಾಸಕ ಸಂದೀಪ ಶೆಟ್ಟಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ದನ್ನೂರ (ಎಸ್) ಗ್ರಾಮದಲ್ಲಿ ಕರ್ನಾಟಕ ಜಾಗೃತಿ ವೇದಿಕೆ, ಬಾಲಯೋಗಿನಿ ಸುವರ್ಣಾ ಮಾತಾಜಿ ಚಾರಿಟೇಬಲ್ ಟ್ರಸ್ಟ್, ರಾಜ್ಯ ಪ್ರೌಢ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ, ನ್ಯೂ ಮದರ್ ತೆರೆಸಾ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಿದ್ದ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

‘ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡ ಭಾಷೆ ಉಸಿರುಗಟ್ಟುವ ವಾತಾವರಣಕ್ಕೆ ಸಿಲುಕಿದ್ದು ಖೇದದ ಸಂಗತಿಯಾಗಿದೆ. ಕಪ್ಪು ಮಣ್ಣಿನ ನಾಡು ಕರುನಾಡು. ಅತಿಹೆಚ್ಚು ಆನೆಗಳನ್ನು ಹೊಂದಿದೆ. ದೇಶದಲ್ಲಿಯೇ ಅತಿ ಹೆಚ್ಚು ಶ್ರೀಗಂಧ ಬೆಳೆಯುವ ನಾಡು ಎಂಬ ಖ್ಯಾತಿ ನಮ್ಮದು. ಜಗತ್ತಿನ ಶ್ರೇಷ್ಠ ಎಂಜಿನಿಯರ್ ಆದ ಸರ್.ಎಂ. ವಿಶ್ವೇಶ್ವರಯ್ಯ ಅವರ ಜನಿಸಿದ್ದು ಇದೇ ನಾಡಲ್ಲಿ. ಇಂತಹ ಸಮೃದ್ಧಿಯ ನಾಡಿನಲ್ಲಿರುವ ನಾವೇ ಧನ್ಯರು ಎಂದು ಹೇಳಿದರು.

ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕಲಬುರಗಿಯ ಪ್ರಾದೇಶಿಕ ನಿರ್ದೇಶಕ ಸಂಗಮೇಶ ಹಿರೇಮಠ, ಬಾಲಯೋಗಿನಿ ಸುವರ್ಣಾ ಮಾತಾಜಿ, ಪ್ರೌಢ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪಾಂಡುರಂಗ ಬೆಲ್ದಾರ್‌, ರಾಜ್ಯ ಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಸಂಜೀವಕುಮಾರ ಸ್ವಾಮಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ, ಶಿವರಾಜ ಕಪಲಾಪುರೆ, ಭಗವಂತರಾವ್‌, ಲಿಂಗರಾಜ ಅರಸ್, ರವಿ ಹಾಸನಕರ, ರಮೇಶ ಬೆಲ್ದಾರ್‌, ಶೇಖ್ ಮೆಹಬೂಬ್‌ ಪಟೇಲ್‌, ಬಾಲಾಜಿ ಕಾಂಬಳೆ, ವಿಜಯಕಲಾ, ದತ್ತು ಕಾಟಕರ್‌ ಇದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಮಲ್ಲಿಕಾರ್ಜುನ ಹಲಮಂಡಗೆ, ನಿರಂಜಪ್ಪ ಪಾತ್ರೆ, ಜಯರಾಜ ಕೊಳ್ಳಾ, ರೌಫ್ ಪಟೇಲ್‌, ಜಯರಾಜ ದಾಬಶೆಟ್ಟಿ, ಸಂತೋಷ ಖಂಡ್ರೆ, ಮಂಜುನಾಥ ಬೆಳಕೇರೆ, ಶರಣಯ್ಯಾ ಸ್ವಾಮಿ ಅವರನ್ನು ರಾಜ್ಯೋತ್ಸವ ಪ್ರಶಸ್ತಿ
ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT