ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಾವ್ಯಕ್ಕಿದೆ ಅಪಾರ ಶಕ್ತಿ

‘ದಾಂಪತ್ಯ ಕವಿಗೋಷ್ಠಿ’: ಸಾಹಿತಿ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಅಭಿಮತ
Last Updated 19 ಮೇ 2022, 2:14 IST
ಅಕ್ಷರ ಗಾತ್ರ

ಬೀದರ್‌: ‘ಕನ್ನಡ ಕಾವ್ಯಕ್ಕೆ ಅಪಾರ ಶಕ್ತಿ ಇದೆ. ಬೇರೆ ಬೇರೆ ಭಾಷೆಗಳ ಸಾಹಿತ್ಯಕ್ಕೂ ಅದರದ್ದೇ ಆದ ಗುಣವಿಶೇಷಣಗಳಿವೆ’ ಎಂದು ಸಾಹಿತಿ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಚಿಂತಕ ದಾನಿ ಬಾಬುರಾವ್ ವಿವಾಹ ವಾರ್ಷಿಕೋತ್ಸವದ ನಿಮಿತ್ತ ನಗರದ ಬಿಗ್‍ಬಜಾರ್ ಸಭಾಂಗಣದಲ್ಲಿ ಆಯೋಜಿಸಿದ್ದ ‘ದಾಂಪತ್ಯ ಕವಿಗೋಷ್ಠಿ’ಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆಯುತ್ತಿರುವ ವಿಭಿನ್ನ ಪ್ರಯೋಗಗಳಿಂದಾಗಿ ಕಸಾಪ ಇನ್ನಷ್ಟು ಜನಮಾನಸಕ್ಕೆ ತಲುಪಲಿದೆ ಎಂದು ಕೊಂಡಾಡಿದರು.

ಸಾಹಿತಿ ದೇವೇಂದ್ರ ಕಮಲ್ ಮಾತನಾಡಿ, ‘ಕವಿಗಳು ಕವನ ವಾಚನ ಸಂದರ್ಭದಲ್ಲಿ ಕಾವ್ಯದ ಉತ್ತಮ ಕವನಗಳಿಗೆ ಆದ್ಯತೆ ನೀಡಬೇಕು. ಕನ್ನಡ ಕವಿತೆಗಳು ಸಹ ಗಜಲ್ ಮತ್ತು ಮುಶಾಯಿರಾಗಳಂತೆ ಪ್ರತಿ ಸಾಲಿಗೂ ತಲೆದೂಗುವಂತಿರಬೇಕು. ಚಪ್ಪಾಳೆ, ಶಿಳ್ಳೆಗಳ ಸುರಿಮಳೆಯಾಗಬೇಕು’ ಎಂದರು.

ಹೈದರಾಬಾದ್‌ ಕರ್ನಾಟಕ ಶಿಕ್ಷಣ ಮಂಡಳಿಯ ನಿರ್ದೇಶಕ ಡಾ.ರಜನೀಶ ವಾಲಿ ಮಾತನಾಡಿದರು.

ಡಾ.ಶ್ರೇಯಾ ಮಹೀಂದ್ರಕರ್ (ಕಾಣಿಕೆ), ರೂಪಾ ಪಾಟೀಲ (ಮದುವೆ ಬಂಧನ), ಸ್ವರೂಪರಾಣಿ ನಾಗೂರೆ (ದಾಂಪತ್ಯ ಪರಿಣಯ), ಪೂಜಾ ಪಟ್ನೆ (ಮರಳಿ ಬಾ ಕೃಷ್ಣ ಕಾದಿರುವಳು ರಾಧೆ), ಶಿವಲಿಂಗ ಹೇಡೆ (ಪ್ರೀತಿಗೆ ನಾ ಕಟ್ಟುವೆ ತೆರಿಗೆ), ಸುನೀತಾ ದಾಡಗೆ (ಹೆಂಡತಿ), ಮಹೇಶ್ವರಿ ಹೇಡೆ (ನಿಮ್ಮೊಳಗಿನ ನನ್ನೊಲವು), ಡಾ.ನಿಜಲಿಂಗ ರಗಟೆ (ನೀ ಬಂದ ದಿನದಿಂದ), ಮಾಣಿಕ ನೇಳಗೆ (ದಾಂಪತ್ಯದ ಸವಿ), ವಿದ್ಯಾವತಿ ಬಲ್ಲೂರ (ಒಲವಿನ ದಾಂಪತ್ಯ), ರಮೇಶ ಬಿರಾದಾರ (ಕಾವ್ಯ), ಡಾ.ಸಂಜೀವಕುಮಾರ ಅತಿವಾಳೆ (ದಾಂಪತ್ಯ ಗೀತೆ), ಸಂತೋಷಕುಮಾರ ಸುಂಕದ (ಇನಿಯನ ಹುಡುಕುತ), ವಿಜಯಕುಮಾರ ಗೌರೆ (ಬಯಲು ಹಸಿರು-ಗಜಲ್), ಆಕಾಶ ಕೋಟೆ (ಪ್ರೀತಿ), ಸಿದ್ಧಾರೂಢ ಭಾಲ್ಕೆ (ನನ್ನೊಲವು) ಕವನ ವಾಚಿಸಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿವಕಾಂತಮ್ಮ ಬಾಬುದಾನಿ ಗೌರವ ಉಪಸ್ಥಿತರಿದ್ದರು. ಸಾಹಿತಿ ಬಸವರಾಜ ಬಲ್ಲೂರ, ಕ್ರಾಂತಿಕುಮಾರ ಸಿರ್ಸೆ, ಹಾವಗಿರಾವ್ ಮೈಲಾರೆ, ರೇವಣಸಿದಪ್ಪ ಜಲಾದೆ, ಪ್ರೊ.ವಿಠಲರೆಡ್ಡಿ, ಬಸವರಾಜ ಭತಮುರ್ಗೆ, ಸಂತೋಷ ಮಂಗಳೂರೆ, ಎಂ.ಎಸ್ ಮನೋಹರ, ಸಿದ್ದಾರೆಡ್ಡಿ ನಾಗೋರಾ, ಗುರುನಾಥ ರಾಜಗೀರಾ, ಪರಮೇಶ್ವರ ಬಿರಾದಾರ, ಲೋಕೇಶ ಗೋಡಬೋಲೆ ಇದ್ದರು.

ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಕಾರ್ಯಕ್ರಮ ನಿರೂಪಿಸಿದರು. ಗೌರವ ಕಾರ್ಯದರ್ಶಿ ಟಿ.ಎಂ ಮಚ್ಚೆ ವಂದಿಸಿದರು. ನವರಸ ಕಲಾಲೋಕದ ವೈಜಿನಾಥ ಸಜ್ಜನಶೆಟ್ಟಿ ಅವರು ಗಾಯನ ಮತ್ತು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT