ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಕನ್ನಡ ನಾಮಫಲಕ ಅಳವಡಿಕೆಗೆ ಆಗ್ರಹ

Published 3 ಮಾರ್ಚ್ 2024, 15:40 IST
Last Updated 3 ಮಾರ್ಚ್ 2024, 15:40 IST
ಅಕ್ಷರ ಗಾತ್ರ

ಬೀದರ್‌: ‘ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜು, ಹೋಟೆಲ್‌, ಅಂಗಡಿ ಮುಂಗಟ್ಟಿನವರು ನಾಮಫಲಕಗಳ ಮೇಲೆ ಶೇ 60ರಷ್ಟು ಕನ್ನಡ ಭಾಷೆಯಲ್ಲಿ ಹೆಸರು ಬರೆಸಬೇಕು. ಇಲ್ಲವಾದರೆ ಅವುಗಳನ್ನು ಸಂಘಟನೆಯ ಕಾರ್ಯಕರ್ತರು ಕಿತ್ತೆಸೆಯುವರು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸೋಮನಾಥ ಮುಧೋಳ ತಿಳಿಸಿದರು.

ಮಾರ್ಚ್‌ 5ರಿಂದ ಪರಭಾಷೆ ನಾಮಫಲಕ ಕಿತ್ತೆಸೆದು ಕನ್ನಡ ನಾಮಫಲಕ ಅಳವಡಿಸುವಂತೆ ಆಗ್ರಹಿಸಿ ಹೋರಾಟ ನಡೆಸಲಾಗುವುದು. ಸುಮಾರು 500 ಕಾರ್ಯಕರ್ತರು ಹೋರಾಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದಕ್ಕಾಗಿ ಐದು ತಂಡಗಳನ್ನು ರಚಿಸಲಾಗಿದೆ. ಒಂದು ತಂಡದಲ್ಲಿ ಸುಮಾರು ನೂರು ಜನ ಕಾರ್ಯಕರ್ತರು ಇರಲಿದ್ದಾರೆ ಎಂದು ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ನಗರದ ಸಿದ್ಧಾರ್ಥ ಕಾಲೇಜು, ಚಿಟ್ಟಾ ಕ್ರಾಸ್‌, ನೌಬಾದ್‌, ಫತ್ತೆ ದರ್ವಾಜಾ ಮತ್ತು ಶಹಾಪುರ ಗೇಟ್‌ನಿಂದ ಬಸವೇಶ್ವರ ವೃತ್ತದವರೆಗೆ ಹೋರಾಟ ನಡೆಯಲಿದೆ ಎಂದು ವಿವರಿಸಿದರು.

ವೇದಿಕೆಯ ಪ್ರಮುಖರಾದ ಅನೀಲ ಹೆಡೆ, ವೀರಶೆಟ್ಟಿ ಗೌಸಪುರೆ, ಸುಭಾಷ ಗಾಯಕವಾಡ, ಸಚಿನ ಬೆನಕನಳ್ಳಿ, ವಿನಾಯಕ ರೆಡ್ಡಿ ಬುಧೇರಾ, ವಿವೇಕ ನಿರ್ಮಳೆ, ಪ್ರಭು ಯಾಕತಪುರ, ಸೋಮಶೇಖರ ಸಜ್ಜನ್, ಉದಯಕುಮಾರ ಅಷ್ಟೂರೆ, ಗೋಪಾಲ ಕುಲಕರ್ಣಿ, ಮಹೇಶ ಕಾಪಸೆ, ಲಕ್ಷ್ಮಣ ಅಟಕಾರ, ವಿಶ್ವನಾಥಗೌಡ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT