ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲಿಶ್ರೀ ಆಸ್ಪತ್ರೆಯಲ್ಲಿ ಕ್ಯಾಥ್‍ಲ್ಯಾಬ್ ಆರಂಭ

ಬಡವರಿಗೆ ಅತ್ಯುತ್ತಮ ಆರೋಗ್ಯ ಸೇವೆ ಲಭಿಸಲಿ: ಶಿವಶರಣಪ್ಪ ವಾಲಿ
Last Updated 22 ಜುಲೈ 2021, 3:37 IST
ಅಕ್ಷರ ಗಾತ್ರ

ಬೀದರ್: ಬಡವರಿಗೂ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ, ಆರೋಗ್ಯ ಸೇವೆಗಳು ಸುಲಭವಾಗಿ ಲಭಿಸುವಂತಾಗಬೇಕು ಎಂದು ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಪ್ರತಿಷ್ಠಾನದ ಅಧ್ಯಕ್ಷ ಶಿವಶರಣಪ್ಪ ವಾಲಿ ಹೇಳಿದರು.

ನಗರದ ವಾಲಿಶ್ರೀ ಆಸ್ಪತ್ರೆಯು ಹೃದಯ ಸಂಬಂಧಿ ಕಾಯಿಲೆಗಳ ಚಿಕಿತ್ಸೆಗೆ ಆರಂಭಿಸಿರುವ ಸುಸಜ್ಜಿತ ಕ್ಯಾಥ್‍ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳು ಸೇವಾ ಕ್ಷೇತ್ರಗಳಾಗಿವೆ. ಸೇವಾ ಮನೋಭಾವ ಇದ್ದವರು, ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕೆಂಬ ತುಡಿತ ಇದ್ದವರು ಈ ಕ್ಷೇತ್ರದಲ್ಲಿ ದೀರ್ಘ ಕಾಲ ಸೇವೆ ಸಲ್ಲಿಸಬಹುದು ಎಂದರು.

ಆರೋಗ್ಯ ಸೇವೆಗಳು ತುಟ್ಟಿಯಾಗಿರುವುದರಿಂದ ಬಡವರು ತೊಂದರೆ ಅನುಭವಿಸುವ ಘಟನೆಗಳು ಆಗಾಗ ನಡೆಯುತ್ತಿವೆ. ವಾಲಿಶ್ರೀ ಆಸ್ಪತ್ರೆಯವರು ಬಡವರಿಗೆ ಆದ್ಯತೆ ನೀಡಬೇಕು. ಆಸ್ಪತ್ರೆಗೆ ದಾಖಲಾಗುವ ಬಡರೋಗಿಗಳು ನಗುಮುಖದೊಂದಿಗೆ ಗುಣಮುಖರಾಗಿ ಮರಳುವಂತೆ ಮಾಡಬೇಕು ಎಂದು ಹೇಳಿದರು.

ವಾಲಿಶ್ರೀ ಆಸ್ಪತ್ರೆಯ ಸಿಇಒ ಡಾ. ವಿ.ವಿ. ನಾಗರಾಜ, ಹೃದ್ರೋಗತಜ್ಞ ಡಾ. ಶ್ರೀಕಾಂತರೆಡ್ಡಿ ಅವರು ಕ್ಯಾಥ್‍ಲ್ಯಾಬ್ ಹೃದ್ರೋಗ ಚಿಕಿತ್ಸಾ ವಿಭಾಗದಲ್ಲಿನ ಸೌಕರ್ಯಗಳು ಮತ್ತು ನೀಡಲಾಗುವ ಚಿಕಿತ್ಸೆಯ ಕುರಿತು ಮಾಹಿತಿ ನೀಡಿದರು.

ಹೃದಯ ಸಂಬಂಧಿ ಕಾಯಿಲೆಗಳಿಗೆ ಇಲ್ಲಿಯೇ ಚಿಕಿತ್ಸೆ ನೀಡಬಹುದು. ದೂರದ, ದೊಡ್ಡ ದೊಡ್ಡ ನಗರಗಳಿಗೆ ಹೋಗುವ ಕಷ್ಟ ತಪ್ಪಲಿದೆ ಎಂದು ಡಾ. ವಿವಿ ನಾಗರಾಜ್ ಹೇಳಿದರು.

ಕಿಡ್ನಿ ಸಂಬಂಧಿತ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಅತ್ಯಾಧುನಿಕ ಸಾಧನಗಳಿವೆ. ಕಿಡ್ನಿಸ್ಟೋನ್ ಸಮಸ್ಯೆಗೆ ಲೇಸರ್ ಚಿಕಿತ್ಸೆ ನೀಡಲಾಗುತ್ತದೆ. ಸರ್ಜರಿ ಇಲ್ಲದೆಯೇ ಕಿಡ್ನಿಸ್ಟೋನ್ ನಿವಾರಿಸ ಬಹುದು ಎಂದು ಯುರೋಲೊಜಿಸ್ಟ್ ಡಾ. ವಿನೋದ ಖೇಳಗಿ ತಿಳಿಸಿದರು.

ನ್ಯೂರೋಸರ್ಜನ್ ಡಾ. ಲಿಂಗರಾಜ ಕಾಡಾದಿ ಅವರು ಮಾತನಾಡಿದರು.

ಬೀದರ್ ಮೆಡಿಕಲ್ ಕಾಲೇಜಿನ ನಿರ್ದೇಶಕ ಡಾ. ಚಂದ್ರಕಾಂತ ಚಿಲ್ಲರ್ಗಿ, ಪ್ರಾಚಾರ್ಯ ಡಾ. ರಾಜೇಶ ಪಾರಾ, ವೈದ್ಯಕೀಯ ಅಧೀಕ್ಷಕ ಶಿವಕುಮಾರ ಶೆಟಕಾರ್ ಅವರು ವಾಲಿಶ್ರೀ ಆಸ್ಪತ್ರೆ ಮತ್ತು ಕ್ಯಾಥ್‍ಲ್ಯಾಬ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ವಾಲಿಶ್ರೀ ಆಸ್ಪತ್ರೆಯ ಚೇರ್‍ಮನ್ ಡಾ.ರಜನೀಶ ವಾಲಿ, ವ್ಯವಸ್ಥಾಪಕ ನಿರ್ದೇಶಕ ಡಾ. ರಾಜಶೇಖರ ಸೇಡಂಕರ್, ಮಲ್ಲಿಕಾರ್ಜುನ ವಾಲಿ, ಅರವಿಂದ ವಾಲಿ, ದೀಪಕ್ ವಾಲಿ, ವಾಲಿಶ್ರೀ ಗ್ರೂಪ್ ಆಫ್ ಕಂಪನೀಸ್ ನಿರ್ದೇಶಕ ಆದೀಶ್ ಆರ್. ವಾಲಿ, ಡಾ.ಖಾಜಾ ಮೈನೋದ್ದಿನ್, ಡಾ.ಪ್ರಸನ್ನ ರೇಷ್ಮೆ, ಡಾ.ಮಹೇಶ ಬಿರಾದಾರ, ಡಾ.ಮದನಾ ವೈಜನಾಥ, ಡಾ.ಕೃಷ್ಣಾರೆಡ್ಡಿ, ಡಾ.ಸಂಜೀವಕುಮಾರ, ಡಾ.ಅವಿನಾಶ ಭೈರೆ, ಡಾ.ರೋಹಿತ ರಂಜೋಳಕರ್, ಡಾ.ಪ್ರೀತಿ ಬಿರಾದಾರ, ಡಾ.ಶಿವಲೀಲಾ ಎಕಲೂರೆ, ಡಾ.ಲಾವಣ್ಯ ಸೋಲಪುರೆ, ಡಾ.ಶ್ರೀಕಾಂತ ಚಿಂಚೋಳಿಕರ್, ನ್ಯೂರೋಸರ್ಜನ್ ಡಾ.ಲಿಂಗರಾಜ ಕಾಡಾದಿ, ಯುರೋಲೊಜಿಸ್ಟ್ ಡಾ.ವಿನೋದ ಖೇಳಗಿ, ಡಾ.ಮಲ್ಲಿಕಾರ್ಜುನ ಜಿ.ಎಸ್., ಡಾ.ವಿಶ್ವನಾಥ ಪಾಟೀಲ್, ಡಾ.ಸುಪ್ರೀತ್ ಹುಗ್ಗೆ, ಡಾ.ನೀರಜಾ ಅಕ್ಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT