ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೀರ್ತನೆಗಳು ಸಮಾಜಕ್ಕೆ ದಿವ್ಯ ಔಷಧಿ’

Last Updated 27 ನವೆಂಬರ್ 2022, 15:50 IST
ಅಕ್ಷರ ಗಾತ್ರ

ಬೀದರ್: ‘ಒತ್ತಡದ ಬದುಕಿನಿಂದ ಹೊರಬರಲು ದಾಸರ ಕೀರ್ತನೆಗಳು ದಿವ್ಯ ಔಷಧಿ’ ಎಂದು ಡಾ.ಉಮೇಶಬಾಬು ಅಭಿಪ್ರಾಯಪಟ್ಟರು.

ನಗರದ ನಾವದಗೇರಿಯಲ್ಲಿ ಸರಸ್ವತಿ ಟ್ಯೂಟೋರಿಯಲ್, ಸಾಕ್ಷಿ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

‘ದಾಸರ ಕೀರ್ತನೆಗಳು, ತತ್ವಪದಗಳು ಅತ್ಯಂತ ಮೌಲಿಕತೆಯಿಂದ ಕೂಡಿವೆ. ಬಸವಾದಿ ಶರಣರ ವಚನಗಳಂತೆ ಜನ ಸಾಮಾನ್ಯರಿಗೆ ಹತ್ತಿರವಾಗಿವೆ’ ಎಂದರು.

ಕಲಾವಿದ ದೇವಿದಾಸ ಚಿಮಕೋಡ ಅಧ್ಯಕ್ಷತೆ ವಹಿಸಿ,‘ದಾಸರು ಸಮಾಜಕ್ಕೆ ವೈಚಾರಿಕ ಸಂದೇಶ ನೀಡಿದ್ದಾರೆ. ಅವುಗಳ ಕುರಿತು ಪ್ರಚಾರ ಮಾಡ ಬೇಕಾದ ಅಗತ್ಯ ಇದೆ. ಮನೆ ಮನೆಗೂ ಅವರ ವಿಚಾರ ಮುಟ್ಟಬೇಕು’ ಎಂದು ತಿಳಿಸಿದರು.

ಕಲಾವಿದ ರಾಜಕುಮಾರ ಶೇಷಪ್ಪ ಚಿದ್ರಿ, ಜಗದೀಶ್ವರ ಮಾತನಾಡಿದರು. ಜೀವನ ಜೈವಂತ ಸ್ವಾಗತಿಸಿದರು. ಆಕಾಶ ಸಜ್ಜನ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ಜೀವಿ ಅನೀಲ ಕುಲಕರ್ಣಿ, ಶಂಕ್ರೆಪ್ಪ ಜನಕಟ್ಟೆ, ಅನಿಲಗೊಂಡ, ಕಲಾವಿದ ಸಿದ್ದಲಿಂಗ, ವೀರಶೆಟ್ಟಿ ಹಾಗೂ ಮಂಜುನಾಥ ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT