ಮಂಗಳವಾರ, ಆಗಸ್ಟ್ 16, 2022
29 °C

ಸಲಿಂಗ ವಿವಾಹಕ್ಕೆ ಯುವತಿಯರಿಬ್ಬರ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಕಲ್ಯಾಣ (ಬೀದರ್‌ ಜಿಲ್ಲೆ): ಇಲ್ಲಿನ ಕಾಲೇಜೊಂದರಲ್ಲಿ ಪಿಯುಸಿ ಅಭ್ಯಾಸ ಮಾಡಿದ್ದ ಇಬ್ಬರು ಯುವತಿಯರು ಪರಸ್ಪರ ಮದುವೆಯಾಗಿ ಸಹಜೀವನ ನಡೆಸುವ ಉದ್ದೇಶದಿಂದ ಬೆಂಗಳೂರಿಗೆ ತೆರಳಿದ್ದರು. ಪೊಲೀಸರು ಅವರನ್ನು ಕರೆತಂದಿದ್ದು, ಅವರು ತಮ್ಮ ಮನೆಗಳಿಗೆ ವಾಪಸ್ಸಾಗಿದ್ದಾರೆ.

‘ಯುವತಿಯೊಬ್ಬಳ ಪಾಲಕರು ಪೊಲೀಸ್ ಠಾಣೆಗೆ ದೂರು ನೀಡಿ ಮಗಳ ಪತ್ತೆಗೆ ಮನವಿ ಮಾಡಿದ್ದರು. ಆಗ ಇಬ್ಬರನ್ನೂ ಪತ್ತೆಹಚ್ಚಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳಿಸಲಾಗಿತ್ತು. ಪಾಲಕರ ಒತ್ತಾಯ, ಪೊಲೀಸರು ಹಾಗೂ ಆಪ್ತ ಸಮಾಲೋಚಕರು ತಿಳಿಹೇಳಿದ ನಂತರ ಇವರು ತಮ್ಮ ಮದುವೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಈ ಇಬ್ಬರೂ ಯುವತಿಯವರು ತಾಲ್ಲೂಕಿನ ಬೇರೆ ಬೇರೆ ಗ್ರಾಮದವರು. ಕಾಲೇಜಿನಲ್ಲಿದ್ದಾಗ ಗೆಳೆತನವಾಗಿತ್ತು. ನಂತರ ಪ್ರೀತಿ ಅಂಕುರಿಸಿ, ಮದುವೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬಂದಿದ್ದರು. ಆದರೆ, ಇವರಿಬ್ಬರ ವಿಚಿತ್ರ ಪ್ರೀತಿಗೆ ಪಾಲಕರು ವಿರೋಧ ವ್ಯಕ್ತಪಡಿಸಿದ್ದರಿಂದ ಇವರ ಬಯಕೆ ಈಡೇರಲಿಲ್ಲ. ಹೀಗಾಗಿ ಬೆಂಗಳೂರಿಗೆ ಓಡಿ ಹೋಗಿದ್ದರು’ ಎನ್ನುವುದು ಮೂಲಗಳ ಮಾಹಿತಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು