ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬ ಭದ್ರತೆಗೆ ಜೀವ ವಿಮೆ: ವಿಶ್ವೆನಾಥ ಗಡ್ಡಿಮನಿ

Last Updated 11 ಫೆಬ್ರುವರಿ 2022, 4:47 IST
ಅಕ್ಷರ ಗಾತ್ರ

‌ಚಿಟಗುಪ್ಪ: ‘ಜೀವ ವಿಮೆ ಕುಟುಂಬಗಳ ಆರ್ಥಿಕ ಭದ್ರತೆಗೆ ಪೂರಕವಾಗಿದ್ದು, ಎಲ್ಲರೂ ಜೀವ ವಿಮೆ ಮಾಡಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಮಾಹಿತಿ ಶಿಕ್ಷಣ ಸಂವಹನ ಸಂಯೋಜಕ ವಿಶ್ವೆನಾಥ ಗಡ್ಡಿಮನಿ ಹೇಳಿದರು.

ತಾಲ್ಲೂಕಿನ ಮುಸ್ತರಿ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕೂಲಿ ಕಾರ್ಮಿಕರಿಗೆ ಜೀವ ವಿಮೆ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಧಾನ ಮಂತ್ರಿ ಜೀವ ಜ್ಯೋತಿ ಬಿಮಾ ಯೋಜನೆ, ಪ್ರಧಾನ ಮಂತ್ರಿ ಬಿಮಾ ಸುರಕ್ಷಾ ಯೋಜನೆ, ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳಿಗೆ ನೋಂದಣಿ ಕಾರ್ಯ ನಡೆಸಲಾಯಿತು.

ಡಿಇಸಿ ಸಂಜುಕುಮಾರ, ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು ಇದ್ದರು.

₹100 ಕೋಟಿ ಕಲ್ಪಿಸಿ

ಬೀದರ್: ಪ್ರಸಕ್ತ ಸಾಲಿನ ರಾಜ್ಯ ಬಜೆಟ್‍ನಲ್ಲಿ ಕೂಡಲಸಂಗಮ ಮಾದರಿಯಲ್ಲಿ ಹಾವೇರಿ ಜಿಲ್ಲೆಯ ಅಂಬಿಗರ ಚೌಡಯ್ಯ ಅವರ ಐಕ್ಯಸ್ಥಳದ ಅಭಿವೃದ್ಧಿಗೆ ₹ 100 ಕೋಟಿ ಅನುದಾನ ಕಲ್ಪಿಸಬೇಕು ಎಂದು ಜಿಲ್ಲಾ ಟೋಕರೆ ಕೋಲಿ ಸಮಾಜ ಸಂಘ ಹಾಗೂ ಅಂಬಿಗರ ಚೌಡಯ್ಯ ಯುವ ಸೇನೆ ಆಗ್ರಹಿಸಿವೆ.

ಜಿಲ್ಲಾ ಟೋಕರೆ ಕೋಳಿ ಸಮಾಜ ಸಂಘದ ಅಧ್ಯಕ್ಷ ಜಗನ್ನಾಥ ಜಮಾದಾರ್ ಹಾಗೂ ಯುವ ಸೇನೆ ಸಂಸ್ಥಾಪಕ ಅಧ್ಯಕ್ಷ ಸುನೀಲ್ ಭಾವಿಕಟ್ಟಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಸಲ್ಲಿಸಿದರು.

ಅಂಬಿಗರ ಚೌಡಯ್ಯ ಹೆಸರಿನಲ್ಲಿ ಸಮುದಾಯ ಭವನ ಹಾಗೂ ವಿದ್ಯಾರ್ಥಿ ವಸತಿ ನಿಲಯ ಸ್ಥಾಪನೆಗೆ ಪ್ರತಿ ಜಿಲ್ಲೆಗೆ ತಲಾ ₹ 2 ಕೋಟಿ ಮೀಸಲಿಡಬೇಕು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ವರದಿ ಪಡೆದ ನಂತರವೇ ಸಿಂಧುತ್ವ ಪ್ರಮಾಣ ಪತ್ರ ನೀಡಬೇಕೆಂಬ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಷಣ್ಮುಕಪ್ಪ ಶೇಕಾ ಪುರ, ಚಂದ್ರಕಾಂತ ಹಳ್ಳಿಖೇಡಕರ್, ಮಹೇಶ ಕೋಲಿ ಇದ್ದರು.

ಕ್ಯಾನ್ಸರ್ ಅರಿವು

ಬೀದರ್: ಪ್ರತಿಯೊಬ್ಬರೂ ಕ್ಯಾನ್ಸರ್ ಅರಿವು ಹೊಂದುವುದು ಅಗತ್ಯವಾಗಿದೆ ಎಂದು ಭಾರತೀಯ ಕುಟುಂಬ ಯೋಜನಾ ಸಂಘ(ಎಫ್‍ಪಿಎಐ)ದ ಸ್ಥಳೀಯ ಶಾಖೆ ಅಧ್ಯಕ್ಷ ಡಾ. ನಾಗೇಶ ಪಾಟೀಲ ಹೇಳಿದರು.

ನಗರದ ಜನಸೇವಾ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶ ಕೊರಳಿನ ಕ್ಯಾನ್ಸರ್ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಂಜಾಗ್ರತೆ ವಹಿಸದ ಕಾರಣ ದೇಶದಲ್ಲಿ ಹೆಚ್ಚು ರೋಗಿಗಳು ಕ್ಯಾನ್ಸರ್‌ನಿಂದ ಸಾವಿಗೀಡಾಗುತ್ತಿದ್ದಾರೆ ಎಂದು ತಿಳಿಸಿದರು.
ಸ್ತನ ಕ್ಯಾನ್ಸರ್ ಹಾಗೂ ಗರ್ಭಕೋಶ ಕೊರಳಿನ ಕ್ಯಾನ್ಸರ್ ಬಗ್ಗೆ ಮಹಿಳೆಯರು ಜಾಗೃತರಾಗಬೇಕು ಎಂದು ಸಂಸ್ಥೆಯ ಕಾರ್ಯಕಾರಿಣಿ ಸದಸ್ಯೆ ಡಾ. ಎ.ಸಿ. ಲಲಿತಮ್ಮ ಹೇಳಿದರು.

ಸಂಘದ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ, ಪುನೀತ್ ಸಾಳೆ, ವಿಜಯಲಕ್ಷ್ಮಿ ಹುಡುಗೆ, ಮುಬಿನ್ ಬೇಗಂ ಇದ್ದರು.
ಭಾರತೀಯ ಕುಟುಂಬ ಯೋಜನಾ ಸಂಘ ಹಾಗೂ ಜನಸೇವಾ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕೌಶಲ ತರಬೇತಿ

ಹುಮನಾಬಾದ್: ಕೌಶಲ ತರಬೇತಿ ಪಡೆ ಯುವ ಮೂಲಕ ಆರ್ಥಿಕ ಬದಲಾವಣೆ ತಂದುಕೊಂಡು ಸ್ವಾವಲಂಬನೆ ಸಾಧಿಸಬ ಹುದು ಎಂದು ಶಾಹಿನ್ ಪ್ರೌಢ ಶಾಲೆ ಶಿಕ್ಷಕ ರಿಯಾಜೋದ್ದೀನ್ ಹೇಳಿದರು.

ಪಟ್ಟಣದಲ್ಲಿ ಆರ್ಬಿಟ್ ಸಂಸ್ಥೆಈಚೆಗೆ ಆಯೋಜಿಸಿದ್ದ ಬಟ್ಟೆ ತಯಾರಿಕಾ ತರಬೇತಿಯ ಸಮಾ ರೋಪ ಸಮಾರಂಭದಲ್ಲಿ ಮಾತನಾಡಿದರು.

ಹಲವು ವಿನ್ಯಾಸದ ವಸ್ತ್ರಗಳು ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿವೆ. ಅವುಗಳು ಬೇಡಿಕೆ ಸಹ ಸಾಕಷ್ಟಿದೆ. ಹೀಗಾಗಿ, ಹೂಸ ವಿನ್ಯಾಸದ ಉಡುಪು ತಯಾರಿಸಿ ಮಾರಾಡ ಮಾಡುವಂತೆ ಸಲಹೆ ನೀಡಿದರು.

ಸಂಸ್ಥೆ ನಿರ್ದೇಶಕ ವಿಕ್ಟರ್ ವಾಸ್, ಯೋಜನೆಯ ವ್ಯವಸ್ಥಾಪಕಿ ಮಿನಿ ಮ್ಯಾಥ್ಯು ಪ್ರಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ಸಚಿನ್, ಆಕಾಶ, ಮೈಮುದಾ ಬಿ, ಕವಿತಾ, ತರಬೇತಿದಾರರು ಇದ್ದರು. ಮುತ್ತಾಹ ತಹರೀನ್ ಸ್ವಾಗತಿಸಿ, ನಿರ್ಮಲಾ ನಿರೂಪಿಸಿ, ಅಬೇದಾ ಬಾನು ವಂದಿಸಿದರು.

ಅರ್ಜಿ ಆಹ್ವಾನ

ಬೀದರ್‌: 2021-22ನೇ ಸಾಲಿನ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿ ಅಲೆಮಾರಿ, ಅರೆಅಲೆಮಾರಿ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಸಮುದಾಯದ ನಿವೇಶನ ಇರುವ ವಸತಿ ರಹಿತರಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ನೌಬಾದ್‌ನ ಸಿದ್ಧಶ್ರೀ ಕಾಂಪ್ಲೆಕ್ಸ್‌ನಲ್ಲಿ ಇರುವ ಕಚೇರಿ ಅಥವಾ ದೂರವಾಣಿ ಸಂಖ್ಯೆ: 08482-232191ಗೆ ಸಂಪರ್ಕಿಸಬಹು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT