ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ನಂದಿ ಕಾಲೊನಿ ಉದ್ಯಾನದಲ್ಲಿ ರಾಷ್ಟ್ರ ಧ್ವಜಾರೊಹಣ

ಧ್ವಜ ಕಟ್ಟೆ ನಿರ್ಮಿಸಿದ ಸಮಾನ ಮನಸ್ಕ ಯುವಕರು
Last Updated 14 ಆಗಸ್ಟ್ 2022, 8:33 IST
ಅಕ್ಷರ ಗಾತ್ರ

ಬೀದರ್: ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ನಗರದ ನಂದಿ ಕಾಲೊನಿಯ ಉದ್ಯಾನದಲ್ಲಿ ಭಾನುವಾರ ರಾಷ್ಟ್ರ ಧ್ವಜಾರೋಹಣ ಮಾಡಲಾಯಿತು.

ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಧ್ವಜಾರೋಹಣ ನೇರವೇರಿಸಿ, ಸ್ವಾತಂತ್ರ್ಯದ ದಿನವೇ ದೇಶದ ಜನರಿಗೆ ಅತಿದೊಡ್ಡ ಹಬ್ಬ. ಪ್ರತಿಯೊಬ್ಬರೂ ದೇಶಾಭಿಮಾನ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ವಿಕ್ರಮ ಮುದಾಳೆ ಅವರ ನೇತೃತ್ವದಲ್ಲಿ ಸಮಾನ ಮನಸ್ಕ ಯುವಕರು ಉದ್ಯಾನದಲ್ಲಿ ಧ್ವಜ ಕಟ್ಟೆ ನಿರ್ಮಿಸಿ, ರಾಷ್ಟ್ರ ಧ್ವಜಾರೋಹಣ ಮಾಡಿರುವುದು ಶ್ಲಾಘನೀಯವಾಗಿದೆ ಎಂದರು.

ಬಿಜೆಪಿಯ ಕಲಬುರಗಿ ವಿಭಾಗ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಬಹಳಷ್ಟು ಜನ ತ್ಯಾಗ, ಬಲಿದಾನ ಮಾಡಿದ್ದಾರೆ. ಇಂದಿನ ಪೀಳಿಗೆಗೆ ಸ್ವಾತಂತ್ರ್ಯ ಹೋರಾಟದ ಇತಿಹಾಸ ಪರಿಚಯಿಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ಭಕ್ತಿ ನಿಟ್ಟೂರೆ ಅವರಿಗೆ ಸನ್ಮಾನಿಸಿ, ಸುಭಾಷ್ ಕರ್ಪೂರ ಫೌಂಡೇಷನ್ ವತಿಯಿಂದ ₹ 11 ಸಾವಿರದ ಚೆಕ್ ನೀಡಿ ಪ್ರೋತ್ಸಾಹಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಹಿರಿಯ ಪತ್ರಕರ್ತ ಶಿವಶರಣಪ್ಪ ವಾಲಿ, ಡಾ.ಸುಭಾಷ್ ಕರ್ಪೂರ, ಡಾ. ಸುಭಾಷ್ ಬಶೆಟ್ಟಿ, ಜಿಲ್ಲಾ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ, ರಮೇಶ ಸಿಂದೋಲ್, ಶಂಕರೆಪ್ಪ ಪಾಟೀಲ, ಬಿಡಿಎ ಮಾಜಿ ಸದಸ್ಯ ಶಾಂತಕುಮಾರ ಮುದಾಳೆ, ನಗರಸಭೆ ಸದಸ್ಯರಾದ ಉಲ್ಲಾಸಿನಿ ವಿಕ್ರಮ ಮುದಾಳೆ, ನಿತಿನ್ ಕರ್ಪೂರ್, ಯುವ ಮುಖಂಡ ವಿಕ್ರಮ ಮುದಾಳೆ, ಸಿದ್ಧರಾಮೇಶ್ವರ ರೆಡ್ಡಿ, ಎಂಜಿನಿಯರ್ ರವಿ ಮೂಲಗೆ, ಡಾ. ಸಂಗಮೇಶ, ಡಾ. ಉಮೇಶ, ವಿವೇಕ ಧನ್ನೂರ, ಸಂತೋಷ ನಿಂಬೂರ, ಅಜಯ್ ಪಾಟೀಲ, ಸೂರ್ಯಕಾಂತ ರಾಮಶೆಟ್ಟಿ ಮೊದಲಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT