ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾ. 12ಕ್ಕೆ ಬೊಮ್ಮಗೊಂಡೇಶ್ವರ ಉತ್ಸವ

ಗೊಂಡ ವಿದ್ಯಾರ್ಥಿ ಸಂಘದ ಸಭೆಯಲ್ಲಿ ನಿರ್ಧಾರ
Last Updated 7 ಫೆಬ್ರುವರಿ 2023, 13:08 IST
ಅಕ್ಷರ ಗಾತ್ರ

ಬೀದರ್: ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘವು ಮಾ. 12 ರಂದು ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಬೊಮ್ಮಗೊಂಡೇಶ್ವರ ಉತ್ಸವ ಹಮ್ಮಿಕೊಳ್ಳಲು ನಿರ್ಧರಿಸಿದೆ.

ಸಂಘದ ಅಧ್ಯಕ್ಷ ಸಂತೋಷ ಜೋಳದಾಪಕೆ ಅಧ್ಯಕ್ಷತೆಯಲ್ಲಿ ನಗರದ ಗಾಂಧಿಗಂಜ್‍ನ ಕನಕ ಭವನದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಉತ್ಸವದ ಪ್ರಯುಕ್ತ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ, ನಿಬಂಧ, ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಲು ತೀರ್ಮಾನಿಸಲಾಯಿತು.

ಬೊಮ್ಮಗೊಂಡೇಶ್ವರ ಜೀವನ ಮತ್ತು ಸಾಧನೆಗಳನ್ನು ಯುವ ಪೀಳಿಗೆಗೆ ಪರಿಚಯಿಸಲು ಉತ್ಸವ ಹಮ್ಮಿಕೊಳ್ಳಲಾಗಿದೆ. ಉತ್ಸವವನ್ನು ಎಲ್ಲ ರೀತಿಯಿಂದಲೂ ಯಶಸ್ವಿಗೊಳಿಸಲು ಸಿದ್ಧತೆ ಆರಂಭಿಸಲಾಗಿದೆ ಎಂದು ಸಂತೋಷ ಜೋಳದಾಪಕೆ ತಿಳಿಸಿದರು.
ಭಿತ್ತಿ ಪತ್ರ, ಪೋಸ್ಟರ್ ಅಳವಡಿಕೆ, ಕರಪತ್ರ ವಿತರಣೆ ಮೂಲಕ ಜಿಲ್ಲೆಯಾದ್ಯಂತ ಉತ್ಸವದ ಪ್ರಚಾರ ಮಾಡಲಾಗುವುದು. ಗೊಂಡ ಸಮುದಾಯ ಸೇರಿದಂತೆ ಸರ್ವರಿಗೂ ಆಹ್ವಾನ ನೀಡಲಾಗುವುದು ಎಂದು ಹೇಳಿದರು.

ರಂಗ ಮಂದಿರದಲ್ಲಿ ಬೊಮ್ಮಗೊಂಡೇಶ್ವರ ಕುರಿತು ವಿಶೇಷ ಉಪನ್ಯಾಸ, ಗೋಷ್ಠಿ, ಸಾಧಕರಿಗೆ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಇದಕ್ಕೂ ಮುನ್ನ ಬೊಮ್ಮಗೊಂಡೇಶ್ವರ ವೃತ್ತದಿಂದ ಉತ್ಸವ ಸ್ಥಳದವರಿಗೆ ಬೊಮ್ಮಗೊಂಡೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ಜರುಗಲಿದೆ. ಕಲಾ ತಂಡಗಳು ಮೆರವಣಿಗೆಗೆ ಕಳೆ ತಂದುಕೊಡಲಿವೆ ಎಂದು ತಿಳಿಸಿದರು.
ಗೊಂಡ ಸಮಾಜದ ಮುಖಂಡರಾದ ಭೀಮಸಿಂಗ್ ಮಲ್ಕಾಪುರ, ಲಕ್ಷ್ಮಣ ಮೇತ್ರೆ, ಆತ್ಮಾನಂದ ಬಂಬಳಗಿ, ಎಂ.ಪಿ. ವೈಜಿನಾಥ, ರವಿಕುಮಾರ ಸಿರ್ಸಿ, ಲಕ್ಷ್ಮಣ ಆಣದೂರುವಾಡಿ, ಸಚಿನ್ ಮಲ್ಕಾಪುರ, ವಿಷ್ಣು ಬೋಲಸೂರೆ, ಅಮೀತ್ ಸೋಲಪುರ, ನರಸಪ್ಪ ಯಾಕತಪುರ, ವಿಜಯಕುಮಾರ ಬ್ಯಾಲಹಳ್ಳಿ, ಶ್ರೀಕಾಂತ ಗೋರನಳ್ಳಿ ಮಾತನಾಡಿದರು.

ಪ್ರಮುಖರಾದ ಸಂಜುಕುಮಾರ ತಳಘಟ್, ವಿಶ್ವನಾಥ ಪಾತರಪಳ್ಳಿ, ಮಲ್ಲಿಕಾರ್ಜುನ ಶೇರಿಕಾರ್, ಹಣಮಂತ ಪಂಚಭಾಯಿ, ಸಿದ್ದು ಗಾದಗಿ, ತುಕಾರಾಮ ಹಳ್ಳಿ, ಪಂಡಿತ ಫತೇಪುರ, ಡಾ. ಉದಯಸಿಂಗ್ ಮಲ್ಕಾಪುರ, ಕಲ್ಲಪ್ಪ ಯರನಳ್ಳಿ, ಕಲ್ಲಪ್ಪ ರಾಯಗೊಂಡ, ಸಾಯಿನಾಥ ಬಾಳೂರ, ಸಿದ್ಧಗೊಂಡ ಸಿದ್ಧೇಶ್ವರ, ಸುರೇಶ ಎಖ್ಖೆಳ್ಳಿಕರ್, ಸುನೀಲ್ ಚಿಲ್ಲರ್ಗಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT