ಮಹಾವೀರ ಜಯಂತಿ: ಮೆರವಣಿಗೆ

ಬುಧವಾರ, ಏಪ್ರಿಲ್ 24, 2019
23 °C

ಮಹಾವೀರ ಜಯಂತಿ: ಮೆರವಣಿಗೆ

Published:
Updated:
Prajavani

ಬೀದರ್‌: ನಗರದಲ್ಲಿ ಮಹಾವೀರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಜಯಂತಿ ಪ್ರಯುಕ್ತ ಜೈನ ಬಸದಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ನಗರದ ಕ್ರಾಂತಿಗಣೇಶ ಮೈದಾನ ಸಮೀಪದ ಜೈನ ಮಂದಿರದ ಆವರಣದಿಂದ ಆರಂಭವಾದ ಮಹಾವೀರ ಭಾವಚಿತ್ರದ ಮೆರವಣಿಗೆಯು ಹಳೆಯ ತರಕಾರಿ ಸಗಟು ಮಾರುಕಟ್ಟೆ, ಗವಾನ್‌ ಚೌಕ್‌, ಚೌಬಾರಾ, ಬಸವೇಶ್ವರ ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್‌ ವೃತ್ತದ ಮಾರ್ಗವಾಗಿ ಜೈನ ಮಂದಿರಕ್ಕೆ ಮರಳಿತು.

ಸಾರೋಟಿನಲ್ಲಿ ಮಹಾವೀರ ಭಾವಚಿತ್ರ ಇಡಲಾಗಿತ್ತು. ಮಹಿಳೆಯರು ಸಮವಸ್ತ್ರ ಧರಿಸಿ ತಲೆಯ ಮೇಲೆ ಕಳಸಹೊತ್ತು ಮೆರವಣಿಗೆಯಲ್ಲಿ ಸೆಳೆದರು. ಸಂಜೆ ಸಾಂಸ್ಕೃತಿಕ ಹಾಗೂ ಪ್ರವಚನ ಕಾರ್ಯಕ್ರಮ ನಡೆದವು

ವಿಜಯಕುಮಾರ ಜೈನ್, ಮಹಾವೀರ ಟಿಕ್ಕೆ, ನೇಮಿನಾಥ ಬೆಳಕೆರೆ, ಅಶೋಕ ವನಕುದುರೆ, ರಾಜಕುಮಾರ ಲೋಖಂಡೆ, ಅಜೀತ ಚಿಂದೆ, ಶೈಲಾ ವನಕುದುರೆ, ಶಾಂತಾಬಾಯಿ ಬೆಳಕೆರೆ, ಸುಗಂಧಾ ವನಕುದರೆ ಇದ್ದರು.

ಜಿಲ್ಲಾಡಳಿತದಿಂದ ಮಹಾವೀರ ಜಯಂತಿ ಆಚರಣೆ

ಬೀದರ್‌: ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಬುಧವಾರ ಮಹಾವೀರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಡಾ.ಎಚ್.ಆರ್. ಮಹಾದೇವ ಹಾಗೂ ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಗಾಳಿ ಅವರು ಮಹಾವೀರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.  ಸಮುದಾಯದ ಗಣ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !