ಮಂಗಳವಾರ, ಸೆಪ್ಟೆಂಬರ್ 21, 2021
27 °C

ಮರಕಲ್: ಹರಿನಾಮ ಸಪ್ತಾಹ ಸಮಾರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜನವಾಡ: ಬೀದರ್‌ ತಾಲ್ಲೂಕಿನ ಮರಕಲ್ ಗ್ರಾಮದಲ್ಲಿ ಅಖಂಡ ಹರಿನಾಮ ಸಪ್ತಾಹ ಸಮಾರೋಪಗೊಂಡಿತು.

ಗ್ರಾಮದ ಪಾಂಡುರಂಗ ಮಂದಿರದಲ್ಲಿ ಏಳು ದಿನ ವಿವಿಧ ಗ್ರಾಮಗಳ ಮಹಾರಾಜರಿಂದ ಹರಿಪಾಠ, ಭಜನೆ, ಕೀರ್ತನೆ ಶ್ರದ್ಧಾ ಭಕ್ತಿಯಿಂದ ನಡೆದವು.

ಸಮಾರೋಪದ ಅಂಗವಾಗಿ ಪಾಂಡುರಂಗ ಮಂದಿರದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಾಂಡುರಂಗ ದೇವರ ಪಲ್ಲಕ್ಕಿ ಮೆರವಣಿಗೆ ಜರುಗಿತು. ಇದೇ ವೇಳೆ ಮೊಸರು ಗಡಿಗೆ ಒಡೆಯಲಾಯಿತು.

ಗ್ರಾಮದ ವೈಜಿನಾಥ ಮಹಾರಾಜ್, ವಾರಕರಿ ಮಂಡಳಿಯ ಸುಭಾಷ್ ದದ್ದಾಪುರ, ಶ್ರೀಕಾಂತ ಬಿರಾದಾರ, ವೀರಶೆಟ್ಟಿ ಬಿರಾದಾರ, ವಿಜಯಕುಮಾರ ಬಿರಾದಾರ, ಸೋಮು ಕಾಬ್ಜೆ, ಸಂಜುಕುಮಾರ ದಾಮೋದರ, ಹರಿಬಾಯಿ, ಮೀರಾಬಾಯಿ, ಪಾರಮ್ಮ, ಸಂಗಮ್ಮ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು