ಬಸವಕಲ್ಯಾಣ (ಬೀದರ್): ‘ಕೂಡಲಸಂಗಮ ಬಸವಧರ್ಮ ಪೀಠದ ಅಧ್ಯಕ್ಷ ನಾನೇ ಎಂದು ಚನ್ನಬಸವಾನಂದ ಸ್ವಾಮೀಜಿ ಹೇಳಿಕೊಂಡಿರುವುದು ಹಾಸ್ಯಾಸ್ಪದ ಮತ್ತು ಖಂಡನಾರ್ಹ’ ಎಂದು ಕೂಡಲಸಂಗಮ–ಬಸವಕಲ್ಯಾಣ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ತಿಳಿಸಿದರು.

ನಗರದಲ್ಲಿ ಭಾನುವಾರ ನಡೆದ ‘ಸ್ವಾಭಿಮಾನಿ ಕಲ್ಯಾಣ ಪರ್ವ’ದಲ್ಲಿ ಚನ್ನಬಸವಾನಂದ ಸ್ವಾಮೀಜಿ ಅವರು ನಾನೇ ಬಸವಧರ್ಮ ಪೀಠದ ಅಧ್ಯಕ್ಷರೆಂದು ಹೇಳಿಕೆ ಕೊಟ್ಟು ಭಕ್ತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ಪೀಠದ ಅಧ್ಯಕ್ಷರಾಗುವ ಹುನ್ನಾರ ನಡೆಸಿದ್ದರಿಂದಲೇ ಅವರನ್ನು ಉಚ್ಚಾಟಿಸಲಾಗಿದೆ. ಹೀಗಿದ್ದರೂ ಅವರು ಸರಿಯಾಗಿಲ್ಲ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಲಿಂಗೈಕ್ಯ ಲಿಂಗಾನಂದ ಸ್ವಾಮೀಜಿ, ಮಾತೆ ಮಹಾದೇವಿ ಅವರೊಂದಿಗೆ ನಾನು ಸೇರಿದಂತೆ ಹಲವರು ಕಷ್ಟಪಟ್ಟು ಬಸವಧರ್ಮ ಪೀಠ ಹಾಗೂ ಅದರ ವ್ಯಾಪ್ತಿಯ ಟ್ರಸ್ಟ್ಗಳನ್ನು ಸ್ಥಾಪಿಸಿದ್ದೇವೆ. ನಮ್ಮಲ್ಲಿ ಕಾನೂನಿನ ಪ್ರಕಾರ ಎಲ್ಲ ದಾಖಲೆಗಳಿದ್ದು ಎಲ್ಲ ಅಂಗ ಸಂಸ್ಥೆಗಳ ಪದಾಧಿಕಾರಿಗಳು ನಮ್ಮೊಂದಿಗಿದ್ದಾರೆ ಎಂದು ದಾಖಲೆಗಳನ್ನು ಪ್ರದರ್ಶಿಸಿದರು.

ಅಲ್ಲಮಪ್ರಭು ಶೂನ್ಯ ಪೀಠಾಧ್ಯಕ್ಷ ಸಿದ್ದರಾಮೇಶ್ವರ ಸ್ವಾಮೀಜಿ ಮಾತನಾಡಿ, 'ಲಿಂಗೈಕ್ಯ ಮಾತೆ ಮಹಾದೇವಿ ಅವರಿಂದಲೇ ಮಾತೆ ಗಂಗಾದೇವಿ ಅವರನ್ನು 2012 ರಲ್ಲೇ ಬಸವಧರ್ಮ ಪೀಠದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಮಾತಾಜಿಯವರು ಲಿಂಗೈಕ್ಯರಾದ ನಂತರ ಎಲ್ಲ ಟ್ರಸ್ಟಿಗಳ ಅನುಮತಿ ಮೇರೆಗೆ ಲಕ್ಷಾಂತರ ಜನರ ಎದುರಲ್ಲಿ ಇವರ ಪೀಠಾರೋಹಣ ನಡೆದಿದೆ. ಈ ಕಾರ್ಯಕ್ರಮದಲ್ಲಿ ಚನ್ನಬಸವಾನಂದ ಸ್ವಾಮೀಜಿಯೂ ಹಾಜರಿದ್ದರು. ಆದರೆ, ಈಗ ವಿರೋಧಿಸುತ್ತಿದ್ದಾರೆ’ ಎಂದರು.

ಬಸವಧರ್ಮ ಪೀಠದ ಬಸವಕುಮಾರ ಸ್ವಾಮೀಜಿ, ಮಾದೇಶ್ವರ ಸ್ವಾಮೀಜಿ, ಮಾತೆ ಜ್ಞಾನೇಶ್ವರಿ, ಮಾತೆ ದಾನೇಶ್ವರಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.