ಶಾಸಕ ಪ್ರಭು ಚವಾಣ್ ಅವರು ಎಳ್ಳ ಅಮಾವಾಸ್ಯೆ ನಿಮಿತ್ತ ಸ್ವ-ಗ್ರಾಮ ಘಮಸುಬಾಯಿ ತಾಂಡಾದಲ್ಲಿನ ತಮ್ಮ ಹೊಲಕ್ಕೆ ತೆರಳಿ ಪೂಜೆ ನೆರವೇರಿಸಿ ಚರಗ ಚಲ್ಲಿದರು. ಬಳಿಕ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಭಜ್ಜಿಪಲ್ಯೆ, ಶೇಂಗಾ-ಎಳ್ಳಿನ ಹೋಳಿಗೆ ಸವಿದರು.

‘ಎಳ್ಳಮವಾಸ್ಯೆ ನಮ್ಮ ಭಾಗದ ರೈತರು ಆಚರಿಸುವ ಪ್ರಮುಖ ಹಬ್ಬವಾಗಿದೆ. ಭೂತಾಯಿಯನ್ನು ಪೂಜಿಸಿ ಹೊಲದಲ್ಲಿ ಕುಳಿತು ಊಟ ಮಾಡುವ ಖುಷಿಯೇ ಬೇರೆ. ಪ್ರತಿ ವರ್ಷದಂತೆ ರೈತ ಮುಖಂಡರ ಕೃಷಿ ಜಮೀನುಗಳಿಗೆ ಭೇಟಿ ನೀಡಿ ರೈತರೊಂದಿಗೆ ಹಬ್ಬ ಆಚರಿಸುತ್ತಿದ್ದೇನೆ’ ಎಂದು ಸಂಭ್ರಮ ಹಂಚಿಕೊಂಡರು.

ನಂತರ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ರೈತರೊಂದಿಗೆ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ದಾಬಕಾದಲ್ಲಿ ಧನಾಜಿ ಜಾಧವ, ಮಾಳೆಗಾಂವನಲ್ಲಿ ಅನೀಲ ದೇಶಮುಖ, ಹಕ್ಯಾಳದಲ್ಲಿ ಕಿರಣ ಪಾಟೀಲ, ಕಮಲನಗರದಲ್ಲಿ ಶಿವಕುಮಾರ ಜುಲ್ಫೆ, ಪಪ್ಪು ವಿಠಲ ಬಿರಾದಾರ, ಹೊಳಸಮುದ್ರ ಮಾರುತಿ ಆಳಂದೆ, ಹಲ್ಲಾಳಿಯಲ್ಲಿ ಪ್ರವೀಣ ಕಾರಬಾರಿ, ಠಾಣಾಕುಶನೂರನಲ್ಲಿ ಧನರಾಜ ವಡೆಯರ್, ಅನೀಲ ಬೋಚರೆ, ಮುಧೋಳದಲ್ಲಿ ಉದಯ ಸೋಲಾಪೂರೆ ಹಾಗೂ ಡೊಂಗರಗಾಂವ ಗ್ರಾಮದ ಗೋವಿಂದ ಪಾಟೀಲ ಅವರ ಹೊಲಗಳಿಗೆ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಾರುತಿ ಚವ್ಹಾಣ, ರಾಮಶೆಟ್ಟಿ ಪನ್ನಾಳೆ, ಶಿವಾನಂದ ವಡ್ಡೆ, ನಾಗೇಶ ಪತ್ರೆ, ಪ್ರತೀಕ ಚವ್ಹಾಣ, ಯೋಗೇಶ ಪಾಟೀಲ, ನಾಗನಾಥ ಚಿಕ್ಲೆ, ಭರತ ಕದಂ, ಬಂಟಿ ರಾಂಪೂರೆ, ನೀಲಕಂಠ ಪಾಟೀಲ, ಪ್ರವೀಣ ಕಾರಬಾರಿ, ಅಶೋಕ ಮೇತ್ರೆ, ಪ್ರದೀಪ ಪವಾರ, ಧನಾಜಿ ರಾಠೋಡ, ಸುಭಾಷ ಸಪರ್ಂಚ್, ಬಾಬುರಾವ ರಾಠೋಡ, ವಿಲಾಸ ಚವ್ಹಾಣ, ದೀಪಕ ಜಾಧವ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.