ಸೋಮವಾರ, ಜನವರಿ 24, 2022
23 °C
ಬಿಜೆಪಿ ವಿರುದ್ಧ ರಾಜಶೇಖರ ಪಾಟೀಲ ಗುಡುಗು

ನಾವೇನು ಬಳೆ ತೊಟ್ಟಿದ್ದೇವಾ? - ರಾಜಶೇಖರ ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ‘ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ನಾವು ಎಲ್ಲದಕ್ಕೂ ತಯಾರಿದ್ದೇವೆ ಎಂದು ಬಿಜೆಪಿ ಮುಖಂಡರು ಹೇಳುತ್ತಿದ್ದಾರೆ. ಇಲ್ಲೇನು ಜಗಳ ಆಡುವುದಿದೆಯಾ, ಹಾಗಾದರೆ ನಾವೇನು ಬಳೆ ತೊಟ್ಟಿದ್ದೇವಾ’ ಎಂದು ಶಾಸಕ ರಾಜಶೇಖರ ಪಾಟೀಲ ಪ್ರಶ್ನಿಸಿದರು.

ಇಲ್ಲಿಯ ಝೀರಾ ಫಂಕ್ಷನ್ ಹಾಲ್‍ನಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು.

‘ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರಿಗೆ ಜಮೀನು-ಆಕಾಶ ಎರಡೂ ಕಾಣುತ್ತಿಲ್ಲ. ನಮ್ಮ ತಂದೆ ಬಸವರಾಜ ಪಾಟೀಲ 1992 ಮತ್ತು 2002 ರಲ್ಲಿ ಎರಡು ಬಾರಿ ಸಚಿವರಾಗಿದ್ದರು. ನಾನು 2018 ರಲ್ಲೇ ಸಚಿವನಾಗಿ ಕೆಲಸ ಮಾಡಿದ್ದೇನೆ. ಇವರಿಗೆ ಈಗ ಮಂತ್ರಿ ಪದವಿ ಸಿಕ್ಕಿದೆ’ ಎಂದು ಕುಟುಕಿದರು.

‘ಎಲುಬಿಲ್ಲದ ನಾಲಿಗೆ ಎಂದು ಖೂಬಾ ಏನೇನೋ ಮಾತನಾಡುತ್ತಿದ್ದಾರೆ. ನಾನು, ಈಶ್ವರ ಖಂಡ್ರೆ ₹ 5 ಲಕ್ಷ ಬೆಲೆಯ ರೇಬಾನ್ ಕನ್ನಡಕ ಹಾಕಿಕೊಳ್ಳುತ್ತೇವೆ ಎಂದಿದ್ದಾರೆ. ಅವರು ₹ 50 ಸಾವಿರ ಕೊಡಲಿ, ಎಷ್ಟು ಬೇಕೋ, ಅಷ್ಟು ಮಂದಿಗೆ ಕನ್ನಡಕ ಕೊಡಿಸೋಣ’ ಎಂದು ಸವಾಲು ಹಾಕಿದರು.

’ಸಚಿವರಾಗಿ ಚವಾಣ್ ಅವರು 28 ತಿಂಗಳಲ್ಲಿ ಮಾಡಿದ ಸಾಧನೆ ಶೂನ್ಯ. ಇವರ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ. ವೈದ್ಯಕೀಯ ಕಾಲೇಜು ನಿರ್ದೇಶಕ ಸ್ಥಾನಕ್ಕೆ ಎಷ್ಟು ಹಣ ಪಡೆದಿದ್ದಾರೆ. ಪಿಡಬ್ಲ್ಯುಡಿ ಅಧಿಕಾರಿ ಹುದ್ದೆಗೆ ಏನು ಸೌದಾ ಆಗಿದೆ ಎನ್ನುವುದನ್ನು ಮುಂದೆ ಹೇಳುತ್ತೇನೆ. ಕೆಲವರು ನನ್ನ ತಂದೆಯವರ ಬಗ್ಗೆ ಮಾತನಾಡಿರುವುದು ಗಮನಕ್ಕೆ ಬಂದಿದೆ. ಧೈರ್ಯವಿದ್ದರೆ ನನ್ನ, ನನ್ನ ಸಹೋದರರ ಬಗ್ಗೆ ಮಾತನಾಡಲಿ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು