ಸೋಮವಾರ, ಸೆಪ್ಟೆಂಬರ್ 28, 2020
21 °C
ಬೀದರ್‌ ನಗರದ ಇಬ್ಬರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ರ್‍ಯಾಂಕ್‌

ಯುಪಿಎಸ್‌ಸಿ ಪರೀಕ್ಷೆಯಲ್ಲಿ 461ನೇ ರ‍್ಯಾಂಕ್‌ ಪಡೆದ ಮೊಹಮ್ಮದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಕೇಂದ್ರ ಲೋಕಸೇವಾ ಆಯೋಗ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ನಗರದ ಓಲ್ಡ್‌ಸಿಟಿಯ ಮೊಹಮ್ಮದ್ ನಜಿಮುದ್ದೀನ್ 461ನೇ ರ‍್ಯಾಂಕ್‌ ಹಾಗೂ ಮೊಹಮ್ಮದ್ ಕಮರುದ್ದೀನ್ 511ನೇ ರ‍್ಯಾಂಕ್‌ ಪಡೆದಿದ್ದಾರೆ.

ಮಹಮ್ಮದ್ ನಜಿಮುದ್ದೀನ್‌ ನಗರದ ಕೇಂದ್ರೀಯ ವಿದ್ಯಾಲಯದಲ್ಲಿ 1ರಿಂದ 10ನೇ ತರಗತಿ ವರೆಗೆ ಓದಿದ್ದಾರೆ. ನಂತರ ಹೈದರಾಬಾದ್‌ನ ಚೈತನ್ಯ ಕಾಲೇಜಿನಲ್ಲಿ ಪಿಯು ಶಿಕ್ಷಣ, ಬೆಂಗಳೂರಿನ ಎಂ.ಎಸ್.ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಬೆಂಗಳೂರಿನಲ್ಲಿ ಸಿವಿಲ್ ಎಂಜಿನಿಯರಿಂಗ್‌ ಪದವಿ ಪೂರೈಸಿದ್ದಾರೆ.ಪ್ರಸ್ತುತ ನಾಗಪುರದ ನ್ಯಾಷನಲ್ ಅಕಾಡೆಮಿ ಆಫ್ ಡೈರೆಕ್ಟರ್‌ನ ಇನ್‌ಕಂ ಟ್ಯಾಕ್ಸ್ ಕಚೇರಿಯಲ್ಲಿ ಅಸಿಸ್ಟಂಟ್ ಕಮಿಷನರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಮೊಹಮ್ಮದ್ ಕಮರುದ್ದೀನ್ ಅವರಿಗೆ 511ನೇ ರ‍್ಯಾಂಕ್‌

ಬೀದರ್‌ನ ಪನ್ಸಾಲ್ ತಾಲೀಂನ ಮೊಹಮ್ಮದ್ ಕಮರುದ್ದೀನ್ ಫಿರೋಜುದ್ದೀನ್ ಖಾನ್ ಅವರು ಯುಪಿಎಸ್‌ಸಿಯಲ್ಲಿ 511ನೇ ರ‍್ಯಾಂಕ್‌ ಪಡೆದಿದ್ದಾರೆ.

ಬೀದರ್‌ನ (ಏರ್‌ಫೋರ್ಸ್‌) ಸ್ಕೂಲ್‌ನಲ್ಲಿ 1 ರಿಂದ 9ನೇ ತರಗತಿವರೆಗೆ ಓದಿದ್ದಾರೆ. ಗುರುನಾನಕ್ ಸ್ಕೂಲ್ನಲ್ಲಿ 10ನೇ ತರಗತಿ ಓದಿ ಪಾಸಾಗಿದ್ದಾರೆ. ಹೈದರಾಬಾದ್‌ನಲ್ಲಿ 12ನೇ ತರಗತಿ ಹಾಗೂ ಗೌಹಾಟಿಯ ಐಐಟಿನಲ್ಲಿ ಬಿಟೆಕ್ ಸಿವಿಲ್ ಎಂಜಿನಿಯರಿಂಗ್ ಮುಗಿಸಿದ್ದಾರೆ.

2014ರಲ್ಲಿ ಇಂಡಿಯನ್ ಎಂಜಿನಿಯರಿಂಗ್ ಸರ್ವಿಸ್ ಪರೀಕ್ಷೆಯಲ್ಲಿ ಪಾಸಾಗಿ ಪ್ರಸ್ತುತ ಉತ್ತರಪ್ರದೇಶದಲ್ಲಿ ಅಸಿಸ್ಟಂಟ್ ಮಟಿರಿಯಲ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸನ್ಮಾನ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) 2019ರಲ್ಲಿ ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ 461ನೇ ರ‍್ಯಾಂಕ್‌ ಪಡೆದ ಮೊಹಮ್ಮದ್ ನಜಿಮುದ್ದೀನ್ ಹಾಗೂ 511ನೇ ರ‍್ಯಾಂಕ್‌ ಪಡೆದ ಮೊಹಮ್ಮದ್ ಕಮರುದ್ದೀನ್ ಅವರನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಸನ್ಮಾನಿಸಲಾಯಿತು.

ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಅವರು ಶಾಲು ಹೊದಿಸಿ ಸನ್ಮಾನಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್, ಬೀದರ್ ಉಪ ವಿಭಾಗಾಧಿಕಾರಿ ಅಕ್ಷಯ್‌ ಶ್ರೀಧರ ಹಾಗೂ ರ‍್ಯಾಂಕ್‌ ಪಡೆದ ಅಭ್ಯರ್ಥಿಗಳ ಪಾಲಕರು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.