ಬೀದರ್: ‘ಮನುಷ್ಯರ ಉದ್ಧಾರ ಮತ್ತು ಏಳ್ಗೆಗಾಗಿ ನೈತಿಕ ಮೌಲ್ಯಗಳ ಶಿಕ್ಷಣ ಅಗತ್ಯ’ ಎಂದು ಸೇಡಂನ ದಾಸಧೇನು ಟ್ರಸ್ಟ್ ಅಧ್ಯಕ್ಷ ವಾಸುದೇವ ಅಗ್ನಿಹೋತ್ರಿ ಹೇಳಿದರು.

ನಗರದ ಹೋಟೆಲ್ ಕೃಷ್ಣಾ ರಿಜೆನ್ಸಿಯಲ್ಲಿ ದಾಸಧೇನು ಟ್ರಸ್ಟ್ ಹಾಗೂ ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ‘ದಾಸ ಸಾಹಿತ್ಯದಲ್ಲಿ ಮೌಲ್ಯಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ದಿಕ್ಸೂಚಿ ಭಾಷಣ ಮಾಡಿದರು.

‘ಮಾನವ ಪ್ರೀತಿ, ಸಹಬಾಳ್ವೆ, ಪರಿಶುದ್ಧ ಜೀವನ, ಹೀಗೆ ಸಮಾಜದ ಹಿತ ಕಾಪಾಡುವ ಅನೇಕ ಅಂಶಗಳು ದಾಸ ಸಾಹಿತ್ಯದಲ್ಲಿ ಇವೆ. ದಾಸರು ಕೇವಲ ಆಧ್ಯಾತ್ಮಿಕ ವಿಚಾರದಲ್ಲಿ ಮಗ್ನರಾಗದೆ ಜಗತ್ತಿನ ಕಲ್ಯಾಣವೇ ಪರಮ ಗುರಿಯನ್ನಾಗಿಸಿಕೊಂಡು ಮನುಷ್ಯರನ್ನು ಸುಖಿ ಮತ್ತು ಸುಸಂಸ್ಕೃತರಾಗಿಸಲು ಶ್ರಮಿಸಿದರು’ ಎಂದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ರಾಜಕುಮಾರ ಅಲ್ಲೂರೆ ಮಾತನಾಡಿ, ‘ದಾಸ ಸಾಹಿತ್ಯದಲ್ಲಿ ಛಂದಸ್ಸು, ಅಲಂಕಾರ, ಉಪಮೆಯ, ಪ್ರತಿಮೆ ಬಳಕೆಯಾಗಿದ್ದು, ಗೇಯ, ಲಯ, ತಾಳ ಸಂಯೋಜನೆಗೊಂಡಿವೆ. ದಾಸರು ಪ್ರಾಣಿ, ಪಕ್ಷಿ, ಸಸ್ಯರಾಶಿಗಳನ್ನು ಹೇರಳವಾಗಿ ಬಳಸಿಕೊಂಡು ಸಾಮಾಜಿಕ ವಿಡಂಬನೆಯನ್ನು ಬಿಂಬಿಸಿರುತ್ತಾರೆ. ಕನ್ನಡ ಸಾಹಿತ್ಯಕ್ಕೆ ದಾಸರ ಕೊಡುಗೆ ಅಪಾರವಾಗಿದೆ’ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯದ ಹಾಲಹಳ್ಳಿಯ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ಮುಖ್ಯಸ್ಥ ರಾಮಚಂದ್ರ ಗಣಾಪೂರ ಮಾತನಾಡಿ, ‘ದಾಸ ಸಾಹಿತ್ಯವು ಆದರ್ಶ ಜೀವನ ನಡೆಸಲು ಸ್ಫೂರ್ತಿಯ ಚಿಲುಮೆಯಾಗಿದೆ. ಮನುಷ್ಯರು ಪರೋಪಕಾರಿ, ಪ್ರಾಮಾಣಿಕ ಹಾಗೂ ಸದಾಚಾರದ ಬದುಕು ಕಟ್ಟಿಕೊಳ್ಳಲು ನೀತಿ ಬೋಧಿಸಿ, ಜನರಲ್ಲಿರುವ ಅಜ್ಞಾನ, ಸ್ವಾರ್ಥ, ಮೌಢ್ಯತೆಯನ್ನು ನಿವಾರಿಸಿ ಧರ್ಮದ ಮಾರ್ಗದಲ್ಲಿ ಜೀವನ ಸಾಗಿಸಲು ಪ್ರೇರೇಪಿಸಿದ್ದಾರೆ’ ಎಂದು ಬಣ್ಣಿಸಿದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಮಹಿಳಾ ಕಾಲೇಜಿನ ಪ್ರಾಚಾರ್ಯ ರಾಜಪ್ಪಾ ಬಬಚಡಿ ಮಾತನಾಡಿ, ‘ಕನ್ನಡ ಸಾಹಿತ್ಯದ ಹಿರಿಮೆಯನ್ನು ಹೆಚ್ಚಿಸುವಲ್ಲಿ ವಚನ ಮತ್ತು ದಾಸ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಈ ಸಾಹಿತ್ಯವು ಮನೆ ಮತ್ತು ಮನಕ್ಕೆ ಮುಟ್ಟಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ’ ಎಂದು ತಿಳಿಸಿದರು.

ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರವೀಂದ್ರ ಲಂಜವಾಡಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಶರಣಪ್ಪ ಮಲಗೊಂಡ, ಶ್ರೀಕಾಂತ ದೊಡಮನಿ, ಶಿವರಾಜ ಪಾಟೀಲ, ಪ್ರೊ.ಮಹೇಶಕುಮಾರ ಆರ್., ಸುನೀತಾ ಕೂಡ್ಲಿಕರ್, ಮಹಾನಂದಾ ಮಡಕಿ, ಸುನೀಲ ಬಿರಾದಾರ, ಬಸವರಾಜ ಖಂಡಾಳೆ, ಎಸ್.ಗಣಪತಿ ಇದ್ದರು.

ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಹಾಗೂ ಭಾಗವಹಿಸಿದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಮಹೇಶ ಮೈಲೂರಕರ್, ಅಬ್ದುಲ್ ಅಲಾಸ್ ಕೀರ್ತನ ಗಾಯನ ನಡೆಸಿದರು. ಶಾಮರಾವ್ ನೆಲವಾಡೆ ಸ್ವಾಗತಿಸಿದರು. ಮೆಹಬೂಬ ಉಸ್ತಾದ್, ಶಿವಶರಣಪ್ಪ ಜಾಪಾಟೆ ನಿರೂಪಿಸಿದರು. ರಾಮಶೆಟ್ಟಿ ಐನೋಳೆ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.