ಬುಧವಾರ, ಸೆಪ್ಟೆಂಬರ್ 22, 2021
21 °C

ನಗರಸಭೆ ಉಪ ಚುನಾವಣೆ: ಫಲಿತಾಂಶ ಸೋಮವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್‌: ಬಸವಕಲ್ಯಾಣ ಹಾಗೂ ಬೀದರ್‌ ನಗರಸಭೆಗಳ ತಲಾ ಎರಡು ವಾರ್ಡ್‌ಗಳಿಗೆ ನಡೆದ ಉಪ ಚುನಾವಣೆ ಫಲಿತಾಂಶ ಸೋಮವಾರ ಬೆಳಿಗ್ಗೆ ಪ್ರಕಟವಾಗಲಿದೆ.

ಬೀದರ್‌ನಲ್ಲಿ ಶೇಕಡ 68.13 ಹಾಗೂ ಬಸವಕಲ್ಯಾಣದಲ್ಲಿ ಶೇಕಡ 67 ರಷ್ಟು ಮತದಾನವಾಗಿದೆ. ಬೀದರ್‌ನಲ್ಲಿ ಎರಡೂ ವಾರ್ಡ್‌ಗಳಲ್ಲಿ ಸ್ಥಾಪಿಸಿದ್ದ ಮತಗಟ್ಟೆಗಳಲ್ಲಿ ಶೇಕಡ 68.13ರಷ್ಟು ಮತದಾನವಾಗಿದೆ. ವಾರ್ಡ್‌ ಸಂಖ್ಯೆ 26 ಹಾಗೂ ವಾರ್ಡ್ ಸಂಖ್ಯೆ 32ರಲ್ಲಿ ತಲಾ ಐದು ಎಲೆಕ್ಟ್ರಾನಿಕ್‌ ಮತ ಯಂತ್ರಗಳಲ್ಲಿ ಮತಗಳು ದಾಖಲಾಗಿವೆ.

ಒಬ್ಬ ಚುನಾವಣಾಧಿಕಾರಿ, ಪರಿವೀಕ್ಷಕ ಹಾಗೂ ಇಬ್ಬರು ಸಹಾಯಕರು ಕಾರ್ಯನಿರ್ವಹಿಸಲಿದ್ದಾರೆ. ಬೀದರ್‌ ತಹಶೀಲ್ದಾರ್‌ ಕಚೇರಿಯಲ್ಲೇ ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, 9 ಗಂಟೆ ವೇಳೆಗೆ ಫಲಿತಾಂಶ ಹೊರಬೀಳಲಿದೆ ಎಂದು ತಹಶೀಲ್ದಾರ್‌ ಮಹಮ್ಮದ್‌ ಶಕೀಲ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.