ಬೀದರ್: ತಾಲ್ಲೂಕಿನ ಚೊಂಡಿಯಲ್ಲಿ ಈಚೆಗೆ ನಡೆದ ಲೈಂಗಿಕ ಅಲ್ಪಸಂಖ್ಯಾತರೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ವಾಲ್ದೊಡ್ಡಿಯ ಸಚಿನ್ ಅಲಿಯಾಸ್ ಭಾನು ಕೊಲೆಯಾದವರು. ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಆಟೊರಿಕ್ಷಾ ಚಾಲಕ ಅನಿಲ್ ಧೂಳಪ್ಪ ಜಮಾದಾರ್ ಬಂಧಿತ ಆರೋಪಿ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗೇಶ ಡಿ.ಎಲ್. ತಿಳಿಸಿದ್ದಾರೆ.

‘ಮಾರ್ಚ್ 22 ರಿಂದ 25ರ ಅವಧಿಯಲ್ಲಿ ಸಚಿನ್ ಅಲಿಯಾಸ್ ಭಾನು ಅವರ ಕೊಲೆ ನಡೆದಿತ್ತು. ಬೀದರ್ ಗ್ರಾಮೀಣ ಸಿಪಿಐ ಚಂದ್ರಶೇಖರ ಅವರ ನೇತೃತ್ವದ ತನಿಖಾ ತಂಡ ಮಾರ್ಚ್ 27ರಂದು ಚೌಳಿ ಕಮಾನ್ ಬಳಿ ಆರೋಪಿಯನ್ನು ಬಂಧಿಸಿದೆ’ ಎಂದು ಅವರು ಹೇಳಿದ್ದಾರೆ.

‘ಅನಿಲ್ ಜಮಾದಾರ್ ಮತ್ತು ಸಚಿನ್ ಪರಿಚಿತರಾಗಿದ್ದರು. ಸಚಿನ್ ನಿತ್ಯ ತಮ್ಮನ್ನು ಆಟೊದಲ್ಲಿ ಮನೆಗೆ ಬಿಟ್ಟು, ಪುನಃ ಕರೆ ತರಬೇಕು. ತಮ್ಮನ್ನೇ ಮದುವೆಯಾಗುವಂತೆ ಪೀಡಿಸುತ್ತಿದ್ದರು. ಇದರಿಂದ ಬೇಸತ್ತ ಅನಿಲ್, ಸಚಿನ್‍ಗೆ ಚೊಂಡಿ ಪ್ರದೇಶಕ್ಕೆ ಕರೆದೊಯ್ದು ಮದ್ಯ ಕುಡಿಸಿದ್ದಾರೆ. ನಂತರ ಅವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ’ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.