ಬುಧವಾರ, ಜನವರಿ 22, 2020
16 °C

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಷನ್‌ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಮನಾಬಾದ್: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯನ್ನು ಕೇಂದ್ರ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿ ಮುಸ್ಲಿಂ ವೆಲ್‌ಫೇರ್ ಅಸೋಸಿಯೇಷನ್‌ ತಾಲ್ಲೂಕು ಘಟಕದಿಂದ ಸೋಮವಾರ ಹಳೆ ತಹಶೀಲ್ದಾರ್ ಕಚೇರಿಯ ಮುಂಭಾಗದಲ್ಲಿ ಸಾಂಕೇತಿಕ ಧರಣಿ ನಡೆಸಿದರು.

ನಂತರ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪೌರತ್ವ ತಿದ್ದುಪಡಿ ಕಾಯ್ದೆ ಭಾರತೀಯ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕಾಯ್ದೆ ಮುಸ್ಲಿಂರ ವಿರುದ್ದವಾಗಿದೆ ಎಂದು ಸಂಘಟನೆಯ ಮುಖಂಡರು ಆರೋಪಿಸಿದರು.

ಕೇಂದ್ರ ಸರ್ಕಾರ ಕೇವಲ ಮುಸ್ಲಿಂ ಸಮುದಾಯವನ್ನು ಕಡೆಗಣಿಸುವ ಉದ್ದೇಶದಿಂದ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಪೌರತ್ವ ಕಾಯ್ದೆಯನ್ನು ಮಂಡಿಸಿದೆ ಎಂದರು.

ಕೇಂದ್ರ ಸರ್ಕಾರಕ್ಕೆ ಏಷ್ಟೆ ಬಹುಮತವಿದ್ದರೂ ಸಂವಿಧಾನ ವಿರೋಧಿ ಕಾಯ್ದೆ ಜಾರಿಗೆ ತರಲು ಅವರಿಗೆ ಅಧಿಕಾರವಿಲ್ಲ. ರಾಷ್ಟ್ರಪತಿಗಳು ಪೌರತ್ವ ತಿದ್ದಪಡಿ ಕಾಯ್ದೆ ಅಂಗಿಕರಿಸದೆ, ರಾಷ್ಟ್ರೀಯ ನೋಂದಣಿ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಕಲಬುರ್ಗಿ ಎಸ್‌ಡಿಪಿಐ ಸಂಘಟನೆ ಕಾರ್ಯದರ್ಶಿ ಶಾಹೀದ‌್ ನಾಸಿರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಮೇಶ ಡಾಕುಳಗಿ, ಪುರಸಭೆ ಸದಸ್ಯರಾದ ಅಫ್ಸರ್‌ಮಿಯ್ಯ, ಗೋರೆಮಿಯ್ಯ, ಉಪನ್ಯಾಸಕ ಮಹಮ್ಮದ್‌ ಜಾಕಿರ್ ಹುಸೇನ್, ಸಮಿತಿಯ ಅಧ್ಯಕ್ಷ ಮಾಜಿದ್ ಖಾನ್, ಎಂ.ಎ.ಬಾಸಿದ್, ಜಮೀಲ್ ಅಹಮ್ಮದ್ ಖಾನ್, ಮಹಮದ್ ಯಾಸೀನ್‌, ಬಸಿರೋದ್ದೀನ್, ವಾಹಿದ್ ಬೇಗ್, ಆಶಿಫ್, ಸೈಯದ್ ಕಲಿಮುಲ್ಲಾ, ಹಾಪೀಸ್, ಮೌಲಾನಾ ಮುಕ್ತಿ ಸೊಹಿಲ್‍ಸಾಬ್, ಮುಕ್ರಮ್‍ಜಾ, ನಯುಮ್ ಭಾಗವಾನ್, ರೆಹಾನ್, ಲಕ್ಷ್ಮಿಪುತ್ರ ಮಾಳಗೆ, ಸುರೇಶ ಘಾಂಗ್ರೆ, ವೀರಪ್ಪ ಧುಮನಸೂರ, ಅಬ್ದುಲ್ ಖಾಲಿದ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು