ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲನಗರ: ನಾಗರ ಪಂಚಮಿ ದಿನದಂದೇ ನಾಗರಹಾವು ಪ್ರತ್ಯಕ್ಷ

Last Updated 14 ಆಗಸ್ಟ್ 2021, 3:20 IST
ಅಕ್ಷರ ಗಾತ್ರ

ಕಮಲನಗರ: ಶುಕ್ರವಾರ ನಾಗರ ಪಂಚಮಿ ದಿನದಂದೇ ನಾಗರಹಾವು ಪ್ರತ್ಯಕ್ಷವಾಗಿದ್ದು, ಭಕ್ತರು ದೂರದಿಂದಲೇ ಕೈ ಮುಗಿದರು.

ತಾಲ್ಲೂಕಿನ ಮುರ್ಕಿ ಗ್ರಾಮದ ಮಲ್ಲಿಕಾರ್ಜುನ ತೇಲಂಗೆ ಅವರ ಮನೆಯ ಆವರಣದಲ್ಲಿ ಕಾಣಿಸಿಕೊಂಡಿದ್ದ ನಾಗರಹಾವಿಗೆ ಓಣಿಯಲ್ಲಿನ ನಾಗ ಭಕ್ತರು ದೂರದಿಂದಲೇ ಪೂಜೆ ಸಲ್ಲಿಸಿ ನಮಸ್ಕರಿಸಿದರು.

ನಂತರ ಶಿಕ್ಷಕ ಮಹಾದೇವ ಮಡಿವಾಳ ಅವರು ಉರಗ ತಜ್ಞರಿಗೆ ಕರೆ ಮಾಡಿದರು. ‌ಸ್ಥಳಕ್ಕೆ ಬಂದ ಉರಗಮಿತ್ರ ಆತ್ಮರಾವ ಕಾಳೆ ಅವರು ಹಾವನ್ನು ಹಿಡಿದು ಕಾಡಿಗೆ ತೆಗೆದುಕೊಂಡು ಹೋಗಿಬಿಟ್ಟರು.

ಕೆಲವು ದಿನಗಳಿಂದ ಇಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾವುಗಳು ಕಂಡು ಬರುತ್ತಿವೆ. ಕಳೆದ ಒಂದು ವಾರದಿಂದ ಇಲ್ಲಿಯವರೆಗೆ 6 ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿರುವುದಾಗಿಆತ್ಮರಾವ ಕಾಳೆ ತಿಳಿಸಿದರು.

ಹಾವು ಕಂಡೊಡನೆ ಅವುಗಳಿಗೆ ಹೊಡೆಯಬೇಡಿ. ಅವುಗಳನ್ನು ಹಿಡಿಯಲು ತಮ್ಮನ್ನು ಸಂಪರ್ಕಿ ಸಬಹುದು ಎಂದು ಅವರು ತಿಳಿಸಿದ್ದಾರೆ. ಮೊಬೈಲ್ ಸಂಖ್ಯೆ: 8618505906ಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT