ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕಾಪಡೆ–ಗುರುನಾನಕ್‌ ಸಂಸ್ಥೆ ಒಪ್ಪಂದ

Published 4 ಏಪ್ರಿಲ್ 2024, 16:19 IST
Last Updated 4 ಏಪ್ರಿಲ್ 2024, 16:19 IST
ಅಕ್ಷರ ಗಾತ್ರ

ಬೀದರ್‌: ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಭಾರತೀಯ ನೌಕಾ ಪಡೆ ಹಾಗೂ ನಗರದ ಗುರುನಾನಕ ಗ್ರುಪ್‌ ಆಫ್‌ ಇನ್‌ಸ್ಟಿಟ್ಯೂಶನ್ಸ್‌ ನಡುವೆ ನವದೆಹಲಿಯಲ್ಲಿ ಬುಧವಾರ ಒಪ್ಪಂದ ಏರ್ಪಟ್ಟಿತು.

ಗುರುನಾನಕ ಸಂಸ್ಥೆಯ ಅಧ್ಯಕ್ಷ ಎಸ್.ಬಲಬೀರ್‌ ಸಿಂಗ್‌ ಮತ್ತು ನೌಕಾಪಡೆಯ ನಿರ್ದೇಶಕ ಕಮೋಡೋರ್ ಜಿ.ರಾಮಬಾಬು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿ, ಕಡತಗಳನ್ನು ವಿನಿಮಯ ಮಾಡಿಕೊಂಡರು.

ಗುರುನಾನಕ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ರೇಷ್ಮಾ ಕೌರ್ ಮಾತನಾಡಿ, ಗುರುನಾನಕ್‌ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ನೌಕಾಪಡೆಯವರು ತರಬೇತಿ ಕೊಡುವರು. ವಿದ್ಯಾರ್ಥಿಗಳು ನೌಕಾಪಡೆ ಸೇರಲು ಅನುಕೂಲವಾಗಲಿದೆ’ ಎಂದರು.

ನೌಕಾಪಡೆಯ ಸಿಎಂಡಿ ಕಲಾ ಹರಿಕುಮಾರ, ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT