ಬೀದರ್: ನೀನಾಸಂ ಸಹಕಾರದೊಂದಿಗೆ ನಗರದ ಜಿಲ್ಲಾ ರಂಗಮಂದಿರದಲ್ಲಿ ಡಿಸೆಂಬರ್ 13, 14 ಮತ್ತು 15 ರಂದು ರಂಗತೋರಣ ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರಂಗತೋರಣದ ರಾಜ್ಯ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ಲು ಹಾಗೂ ಕಲ್ಯಾಣ ರಂಗತೋರಣದ ಸದಸ್ಯ ಶಶಿಧರ ಹೊಸಳ್ಳಿ ತಿಳಿಸಿದರು.

ಬೆಂಗಳೂರು, ಮೈಸೂರು, ಶಿವಮೊಗ್ಗದಂತಹ ನಗರಗಳಲ್ಲಿಯೇ ಹೊಸ ಹೊಸ ನಾಟಕಗಳು ಪ್ರದರ್ಶನಗೊಳ್ಳುತ್ತವೆ. ಹೀಗಾಗಿ ರಂಗತೋರಣವು ಪ್ರತಿ ವರ್ಷ ನಾಡಿನ ಪ್ರಮುಖ ರಂಗ ತಂಡಗಳನ್ನು ಆಹ್ವಾನಿಸಿ, ಈ ಭಾಗದಲ್ಲಿ ಉತ್ತಮ ನಾಟಕಗಳನ್ನು ಪ್ರದರ್ಶಿಸುತ್ತ ಬಂದಿದೆ. ರಂಗಮದಿರದಲ್ಲಿ ಮೂರು ದಿನಗಳ ಕಾಲ ಪ್ರತಿ ದಿನ ಸಂಜೆ 6.30ಕ್ಕೆ ನಾಟಕ ಪ್ರದರ್ಶನ ನಡೆಯಲಿದೆ ಎಂದು ಸೋಮವಾರ ಇಲ್ಲಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

13 ರಂದು ಬೆಳಗಾವಿಯ ಮಹಾಂತೇಶ ರಾಮದುರ್ಗ ಸೈ ನಿರ್ದೇಶನದ ‘ದೂರದೇಶದ ಹಕ್ಕಿ’, 14 ರಂದು ರಂಗ ನಿರ್ದೇಶಕ ಕೆ.ವಿ.ಅಕ್ಷರ ನಿರ್ದೇಶನದ ‘ಸೇತುಬಂಧನ’ ಹಾಗೂ 15 ರಂದು ಜೋಸೆಫ್ ಜಾನ್ ನಿರ್ದೇಶನದ‘ಆಶ್ಚರ್ಯ ಚೂಡಾಮಣಿ’ ನಾಟಕ ಪ್ರದರ್ಶನಗೊಳ್ಳಲಿದೆ.

ಅಂಬರೀಷ ಬಟನಾಪೂರೆ, ವೀರೇಶ ಸ್ವಾಮಿ ಮಾಧ್ಯಮಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.