ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌ | ಈಶಾನ್ಯ ಪದವೀಧರರ ಮತದಾರರ ಪಟ್ಟಿ: ಆಕ್ಷೇಪಣೆಗೆ ಕಾಲಾವಕಾಶ

Published 23 ನವೆಂಬರ್ 2023, 14:22 IST
Last Updated 23 ನವೆಂಬರ್ 2023, 14:22 IST
ಅಕ್ಷರ ಗಾತ್ರ

ಬೀದರ್‌: ‘ಈಶಾನ್ಯ ಪದವೀಧರರ ಕರಡು ಮತದಾರರ ಪಟ್ಟಿ ಸಿದ್ಧವಾಗಿದ್ದು, 25,489 ಮತದಾರರು ಹೆಸರು ನೋಂದಣಿ ಮಾಡಿಸಿಕೊಂಡಿದ್ದಾರೆ. ಡಿಸೆಂಬರ್‌ 9ರ ಒಳಗೆ ಆಕ್ಷೇಪಣೆಗೆ ಕಾಲಾವಕಾಶ ನೀಡಲಾಗಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

‘ಕರಡು ಮತದಾರರ ಪಟ್ಟಿ ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ ಕಚೇರಿ, ಉಪವಿಭಾಗಾಧಿಕಾರಿ ಕಚೇರಿ, ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಹಾಗೂ ನಿಗದಿತ ಸ್ಥಳಗಳ ಸೂಚನಾ ಫಲಕದಲ್ಲಿ ಅಂಟಿಸಲಾಗಿದೆ. ಆಕ್ಷೇಪಣೆಗಳಿದ್ದಲ್ಲಿ ಸಂಬಂಧಿಸಿದವರು ಅರ್ಜಿ ಸಲ್ಲಿಸಬಹುದು’ ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 25,489 ಮತದಾರರು ಹೆಸರು ನೋಂದಣಿ ಮಾಡಿಸಿದ್ದಾರೆ. ಇದರಲ್ಲಿ 15,829 ಪುರುಷ ಹಾಗೂ 9,660 ಮಹಿಳಾ ಮತದಾರರಿದ್ದಾರೆ. ಬಸವಕಲ್ಯಾಣ ತಾಲ್ಲೂಕಿನಿಂದ 2,739 ಪುರುಷ, 1,737 ಮಹಿಳಾ ಮತದಾರರು, ಹುಮನಾಬಾದ್‌ ತಾಲ್ಲೂಕಿನಲ್ಲಿ 3,194 ಪುರುಷ ಹಾಗೂ 2,419 ಮಹಿಳಾ ಮತದಾರರು, ಬೀದರ್‌ ದಕ್ಷಿಣದಿಂದ 950 ಪುರುಷ ಹಾಗೂ 559 ಮಹಿಳಾ ಮತದಾರರು, ಬೀದರ್‌ ತಾಲ್ಲೂಕಿನಿಂದ 4,498 ಪುರುಷ ಹಾಗೂ 3,100 ಮಹಿಳಾ ಮತದಾರರು, ಭಾಲ್ಕಿ ತಾಲ್ಲೂಕಿನಿಂದ 2,405 ಪುರುಷ ಹಾಗೂ 1,152 ಮಹಿಳಾ ಮತದಾರರು, ಔರಾದ್‌ ತಾಲ್ಲೂಕಿನಿಂದ 2,043 ಪುರುಷ ಹಾಗೂ 6,96 ಮಹಿಳಾ ಮತದಾರರು ನೋಂದಣಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT