ಮಂಗಳವಾರ, ಜನವರಿ 28, 2020
19 °C

'ವ್ಯಕ್ತಿತ್ವ ವಿಕಸನಕ್ಕೆ ಶಿಬಿರ ಸಹಕಾರಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಟಗುಪ್ಪ: ‘ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಗೆ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಸಹಕಾರಿ’ ಎಂದು ಪ್ರಾಚಾರ್ಯ ಪಿ.ಆರ್.ಹುಗ್ಗಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ತಾಳಮಡಗಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ, ಗಾಂಧಿ ನಗರದಲ್ಲಿ ಈಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೊಜನೆಯ ಘಟಕದ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.

‘ಸ್ವಚ್ಛತೆ ಕುರಿತು ಜಾಗ್ರತಿ ಮೂಡಿಸುವುದರೊಂದಿಗೆ, ಇಲ್ಲಿಯ ನಾಗರಿಕರಲ್ಲಿ ಬಯಲು ಶೌಚದಿಂದಾಗುವ ದುಷ್ಪರಿಣಾಮಗಳ ಬಗ್ಗೆ  ಮಾಹಿತಿ ನೀಡುವ ಕೆಲಸ ನಡೆಯಬೇಕು’ ಎಂದರು.

ಹಣಮಂತರಾವ್ ಮೈಲಾರೆ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷೆ ಮಧುಮತಿ.ಎಸ್.ಚಿನಕೇರಾ ಹಾಗೂ ಸೇಂಟ್ ಮೇರಿ ಶಾಲೆಯ ಪ್ರಾಂಶುಪಾಲ ರೋಸ್ಲಿ ಪೌಲ್ ಇದ್ದರು.

ಎನ್‍ಎಸ್‍ಎಸ್ ಕಾರ್ಯಕ್ರಮ ಅಧಿಕಾರಿ ನರೋಬಾ ಉಮಾಕಾಂತ ಮಾತನಾಡಿದರು. ಹಣಮಂತ.ಜಿ ನಿರೂಪಿಸಿದರು. ಆವಂತಿ.ಎಸ್ ವಂದಿಸಿದರು.

ಪ್ರತಿಕ್ರಿಯಿಸಿ (+)