ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿಗೆ ನೆಟೆ ರೋಗ: ಅಧಿಕಾರಿಗಳ ಪರಿಶೀಲನೆ

Last Updated 24 ನವೆಂಬರ್ 2022, 4:54 IST
ಅಕ್ಷರ ಗಾತ್ರ

ಬೀದರ್: ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಹೋಬಳಿ ವ್ಯಾಪ್ತಿಯ ನೆಟೆ ರೋಗ ಬಾಧಿತ ತೊಗರಿ ಹೊಲಗಳಿಗೆ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ತೊಗರಿಯಲ್ಲಿ ನೆಟೆ ರೋಗ ಕಂಡುಬಂದಲ್ಲಿ ಬಾಧಿತ ಗಿಡಗಳನ್ನು ಕಿತ್ತು ನಾಶಪಡಿಸಬೇಕು. ಚೆನ್ನಾಗಿ ಇರುವ ಬೆಳೆಗೆ ಪ್ರತಿ ಲೀಟರ್ ನೀರಿಗೆ ಕಾರ್ಬನ್ ಡೈಜಿಮ್ 50 ಡಬ್ಲ್ಯೂಪಿ 2 ಗ್ರಾಂ ಅಥವಾ ಸಂಯುಕ್ತ ಶಿಲಿಂಧ್ರನಾಶಕ (ಕಾರ್ಬನ್‍ ಡೈಜಿಮ್+ ಮ್ಯಾಕೋಜೆಬ್) 2 ಗ್ರಾಂ ಬೆರೆಸಿ ಬಾಧಿತ ಗಿಡಗಳ ಕಾಂಡ ಹಾಗೂ ಸುತ್ತಮುತ್ತಲಿನ ಕಾಂಡಗಳಿಗೆ ಸಿಂಪಡಿಸಬೇಕು. ದ್ರಾವಣ ಬುಡಕ್ಕೆ ಬೀಳದಂತೆ ನೋಡಿಕೊಳ್ಳಬೇಕು ಎಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರ ತಿಳಿಸಿದರು. ರೋಗದ ತೀವ್ರತೆ ಹೆಚ್ಚಿರುವ ಪ್ರದೇಶದಲ್ಲಿ ಏಕದಳ, ದ್ವಿದಳ ಧಾನ್ಯಗಳಾದ ಜೋಳ, ಮೆಕ್ಕೆ ಜೋಳ, ಸಜ್ಜೆ ಜೋಳ, ಸಜ್ಜೆ ಬೆಳೆಗಳನ್ನು ಎರಡು, ಮೂರು ವರ್ಷ ಪರಿವರ್ತಿಸಬೇಕು. ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡಬೇಕು ಎಂದು ಸಲಹೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ಗೌತಮ, ಸಹಾಯಕ ಕೃಷಿ ಅಧಿಕಾರಿ ಅಶೋಕ ಪಾಟೀಲ, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಪ್ರಶಾಂತ ಪೌಲ್ ಹಾಗೂ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ನೀಲಾಂಬಿಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT