ಬುಧವಾರ, ಡಿಸೆಂಬರ್ 1, 2021
22 °C
ನುಗ್ಗೆಕಾಯಿ ಬೆಲೆ ಪ್ರತಿ ಕೆಜಿಗೆ ₹ 100

ಈರುಳ್ಳಿ, ಟೊಮೆಟೊ, ಮೆಣಸಿನಕಾಯಿ ಬೆಲೆ ಇಳಿಕೆ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್: ಮಹಾನವಮಿ, ವಿಜಯ ದಶಮಿ ಹಾಗೂ ಸೀಗೆ ಹುಣ್ಣಿಮೆ ಈಚೆಗಷ್ಟೇ ಮುಗಿದಿವೆ. ಹೀಗಾಗಿ ಬಹುತೇಕ ತರಕಾರಿ ಬೆಲೆಗಳಲ್ಲಿ ಕೊಂಚ ಇಳಿಕೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯ ಸಂದರ್ಭದಲ್ಲಿ ಗ್ರಾಹಕರು ಸ್ವಲ್ಪ ಮಟ್ಟಿಗೆ ನೆಮ್ಮದಿಯ ಉಸಿರು ಬಿಡುವಂತಾಗಿದೆ.

ನಗರದ ಮಾರುಕಟ್ಟೆಗೆ ಕಳೆದ ವಾರ ಖಾಟು ಹೆಚ್ಚಿಸಿದ್ದ ಹಸಿ ಮೆಣಸಿನಕಾಯಿ ಹಾಗೂ ಈರುಳ್ಳಿ ಸ್ವಲ್ಪ ತಣ್ಣಗಾಗಿವೆ. ಈರುಳ್ಳಿ ಗುಣಮಟ್ಟದ ಆಧಾರದ ಮೇಲೆ ಮೂರು ಬೆಲೆಗಳಲ್ಲಿ ಮಾರಾಟವಾಗುತ್ತಿದೆ. ತರಕಾರಿ ವ್ಯಾಪಾರಿಗಳು ಟಾಟಾ ಏಸ್‌ ಹಾಗೂ ಕೈಗಾಡಿಗಳಲ್ಲಿ ಓಣಿ ಓಣಿಗಳಲ್ಲಿ ಸಂಚರಿಸಿ ₹ 100ಗೆ ನಾಲ್ಕು ಕೆಜಿ ಸಣ್ಣ ಗಾತ್ರದ ಈರುಳ್ಳಿ ಮಾರಾಟ ಮಾಡುತ್ತಿದ್ದಾರೆ.

ಹಿಂದಿನ ವಾರ ಮಳೆಯ ಅಬ್ಬರಕ್ಕೆ ಬಹುತೇಕ ಕಡೆ ಟೊಮೆಟೊ ಬೆಳೆ ಕೊಚ್ಚಿ ಹೋಗಿತ್ತು. ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಆವಕವಾಗದ ಕಾರಣ ಟೊಮೆಟೊ ಬೆಲೆಯಲ್ಲೂ ಹೆಚ್ಚಳವಾಗಿತ್ತು. ಇದೀಗ ಟೊಮೆಟೊ ಬೆಲೆ ಸಹಜ ಸ್ಥಿತಿಗೆ ಮರಳಿದೆ.

ಪ್ರತಿ ಕ್ವಿಂಟಲ್‌ಗೆ ಹಸಿ ಮೆಣಸಿನಕಾಯಿ, ಟೊಮೆಟೊ ₹ 2 ಸಾವಿರ, ಗಜ್ಜರಿ, ಬೀಟ್‌ರೂಟ್‌ ₹ 1 ಸಾವಿರ, ಈರುಳ್ಳಿ, ಬೀನ್ಸ್‌, ಬದನೆಕಾಯಿ, ತೊಂಡೆಕಾಯಿ, ಬೆಂಡೆಕಾಯಿ, ಮೆಂತೆ ಸೊಪ್ಪು ಹಾಗೂ ಕೊತಂಬರಿ ಬೆಲೆ ₹500 ಇಳಿದಿದೆ.

ಈ ವಾರ ನುಗ್ಗೆಕಾಯಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1 ಸಾವಿರ ಹೆಚ್ಚಾಗಿದೆ. ಎಲೆಕೋಸು, ಸಬ್ಬಸಗಿ ಹಾಗೂ ಪಾಲಕ್‌ ಬೆಲೆ ₹ 500 ಏರಿಕೆಯಾಗಿದೆ. ಆಲೂಗಡ್ಡೆ, ಬೆಳ್ಳುಳ್ಳಿ, ಹಿರೇಕಾಯಿ, ಹೂಕೋಸು ಹಾಗೂ ಕರಿಬೇವು ಬೆಲೆ ಮಾರುಕಟ್ಟೆಯಲ್ಲಿ ಸ್ಥಿರವಾಗಿದೆ.

ಬೆಳಗಾವಿಯಿಂದ ಹಸಿ ಮೆಣಸಿನಕಾಯಿ ಹಾಗೂ ಕೊತಂಬರಿ ಬಂದಿದೆ. ಸೋಲಾಪುರದಿಂದ ಈರುಳ್ಳಿ, ಬೆಳ್ಳುಳ್ಳಿ ಹಾಗೂ ಹಸಿ ಶುಂಠಿ ಆವಕವಾಗಿದೆ. ತೆಲಂಗಾಣದ ಜಿಲ್ಲೆಗಳಿಂದ ನುಗ್ಗೆಕಾಯಿ, ಹಿರೇಕಾಯಿ, ಚವಳೆಕಾಯಿ, ಹಾಗಲಕಾಯಿ, ಸೋರೆಕಾಯಿ ಬಂದಿದೆ.

‘ಮಾರುಕಟ್ಟೆಯಲ್ಲಿ ಈ ವಾರ ಅನೇಕ ತರಕಾರಿಗಳ ಬೆಲೆ ಕಡಿಮೆಯಾಗಿದೆ. ಗ್ರಾಹಕರು ನೆಮ್ಮದಿಯಿಂದ ತರಕಾರಿ ಕೊಂಡುಕೊಳ್ಳಲು ಸಾಧ್ಯವಾಗಿದೆ. ಆದರೆ, ದೀಪಾವಳಿ ವೇಳೆಗೆ ತರಕಾರಿ ಬೆಲೆ ಮತ್ತೆ ಹೆಚ್ಚಳವಾದರೆ ಅಚ್ಚರಿ ಇಲ್ಲ’ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ಹೇಳುತ್ತಾರೆ.
..................................................................
ಬೀದರ್‌ ತರಕಾರಿ ಚಿಲ್ಲರೆ ಮಾರುಕಟ್ಟೆ
........................................................................
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ
........................................................................
ಈರುಳ್ಳಿ 40-50,40-45
ಮೆಣಸಿನಕಾಯಿ 40-50,25-30
ಆಲೂಗಡ್ಡೆ 40-50,35-40
ಎಲೆಕೋಸು 30-40,40-50
ಬೆಳ್ಳುಳ್ಳಿ 80-90,85-90
ಗಜ್ಜರಿ 40-50,35-40
ಬೀನ್ಸ್‌ 130-140,130-135
ಬದನೆಕಾಯಿ 40-50,40-45
ಮೆಂತೆ ಸೊಪ್ಪು 40-50, 40-45
ಹೂಕೋಸು 40-50, 40-50
ಸಬ್ಬಸಗಿ 35-40, 40-45
ಬೀಟ್‌ರೂಟ್‌ 50-60, 40-50
ತೊಂಡೆಕಾಯಿ 30-40,30-35
ಕರಿಬೇವು 20-30,25-30
ಕೊತಂಬರಿ 30-40,30-35
ಟೊಮೆಟೊ 60-70,40-50
ಪಾಲಕ್‌ 30-40, 40-45
ಬೆಂಡೆಕಾಯಿ 40-45 ,40-50
ಹಿರೇಕಾಯಿ 40-50,45-50
ನುಗ್ಗೆಕಾಯಿ 80-90, 90-100

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು