ಔರಾದ್: ಬೀದರ್ ಜಿಲ್ಲೆಯ ಗಡಿ ಭಾಗವಾದ ಔರಾದ್ ತಾಲ್ಲೂಕಿನಲ್ಲಿ ಏಳನೇ ತಾಲ್ಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ತಯಾರಿ ನಡೆದಿದೆ.

ಸಮ್ಮೇಳನ ಅದ್ದೂರಿ ಹಾಗೂ ಅರ್ಥಪೂರ್ಣವಾಗಿ ನಡೆಸಲು ಈಚೆಗೆ ಸಾಹಿತ್ಯಾಸಕ್ತರು, ಚಿಂತಕರು, ವಿವಿಧ ಸಂಘಟನೆಗಳ ಪ್ರಮುಖರ ಸಭೆ ನಡೆಯಿತು.

2026ರ ಜನವರಿ ತಿಂಗಳ ಕೊನೆ ವಾರದಲ್ಲಿ ಸಮ್ಮೇಳನ ನಡೆಸುವುದು, ಸ್ಥಳೀಯ ಶಾಸಕ ಪ್ರಭು ಚವಾಣ್ ಸ್ವಾಗತ ಸಮಿತಿ ಅಧ್ಯಕ್ಷರಾಗಿ ನೇಮಿಸುವುದು ಹಾಗೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮ್ಮೇಳನ ದಿನಾಂಕ ನಿಗದಿ ಮಾಡಲು ಸಭೆಯಲ್ಲಿ ಚರ್ಚಿಸಿದರು.

ಸಮ್ಮೇಳನದ ತೀರ್ಮಾನಗಳು ಏಕ ಪಕ್ಷೀಯವಾಗಿ ಆಗಬಾರದು. ಔರಾದ್ನಲ್ಲೇ ಸಭೆ ಮಾಡಿ ತೀರ್ಮಾನಿಸಬೇಕು. ನಾಡು ನುಡಿ ಸೇವೆಯಲ್ಲಿ ತೊಡಗಿಸಿಕೊಂಡ ಸ್ಥಳೀಯರನ್ನು ಗುರುತಿಸಿ ಸಮ್ಮೇಳನಾಧ್ಯಕ್ಷರಾಗಿ ಮಾಡಬೇಕು. ದೀರ್ಘ ಕಾಲದಿಂದ ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಹಾಗೂ ಮಹಿಳೆಯರನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಹಲವರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಕೆಲವರು ಸಂತಪೂರ ಹೋಬಳಿ ಕೇಂದ್ರದಲ್ಲಿ

ಸಮ್ಮೇಳನ ನಡೆಸಬೇಕು ಎಂಬ ಸಲಹೆ ನೀಡಿದರು. ಕಸಾಪ ತಾಲ್ಲೂಕು ಅಧ್ಯಕ್ಷ ಬಾಲಾಜಿ ಅಮರವಾಡಿ, ಶಿವರಾಜ ಅಲ್ಮಾಜೆ, ಡಾ. ವೈಜಿನಾಥ ಬುಟ್ಟೆ ಸಮ್ಮೇಳನ ತಯಾರಿ ಕುರಿತು ಮಾತನಾಡಿದರು.

ಪಂಡರಿ ಆಡೆ, ಜಗನ್ನಾಥ ಮೂಲಗೆ, ಬಾಲಾಜಿ ಕುಂಬಾರ, ಚಂದ್ರಕಾಂತ ಘುಳೆ, ರಾಜಕುಮಾರ, ಶಿವರಾಜ ಶಟಕಾರ, ಜಗನ್ನಾಥ ದೇಶಮುಖ, ಗುರುನಾಥ ದೇಶಮುಖ, ಅಶೋಕ ಶೆಂಬೆಳ್ಳೆ, ಅಮರಸ್ವಾಮಿ, ಬಸವರಾಜ ಶಟಕಾರ, ಸುಭಾಷ ಲಾಧಾ, ವೀರೇಶ ಅಲಮಾಜೆ, ರವಿ ಡೋಳೆ, ಶಿವಕುಮಾರ ಪಾಟೀಲ, ರಾಹುಲ್ ಖಂದಾರೆ, ಆನಂದ ದ್ಯಾಡೆ, ಅಂಬಾದಾಸ ನೇಳಗೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.