ಬುಧವಾರ, ಜೂನ್ 23, 2021
30 °C

ಆಮ್ಲಜನಕ ಸಾಂದ್ರಕ ಯಂತ್ರ ದೇಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ಇಲ್ಲಿಯ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಗುರುವಾರ ಉಮಾದೇವಿ ಪ್ರಕಾಶ ಖಂಡ್ರೆ ಫೌಂಡೇಶನ್ ಸಹಕಾರದೊಂದಿಗೆ ಮಾಜಿ ಶಾಸಕ ಪ್ರಕಾಶ ಖಂಡ್ರೆ 2 ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ಕೊಡುಗೆಯಾಗಿ ನೀಡಿದರು.

ಯುವ ಮುಖಂಡ ಪ್ರಸನ್ನ ಪ್ರಕಾಶ ಖಂಡ್ರೆ ಮಾತನಾಡಿ, ‘ತಾಲ್ಲೂಕಿನ ಜನರಿಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿ ಆಗಲೆಂದು 2 ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿದ್ದೇವೆ. ಈ ಮುಂಚೆಯೂ ಕೂಡಾ ಆಸ್ಪತ್ರೆ ಸೇರಿದಂತೆ ವಿವಿಧ ಇಲಾಖೆ, ಜನರಿಗೆ ಮಾಸ್ಕ್‌, ಸ್ಯಾನಿಟೈಸರ್ ನೀಡಲಾಗಿದೆ. ಇನ್ನು ಮುಂದೆಯೂ ಜನರ ಆರೋಗ್ಯದ ದೃಷ್ಟಿಯಿಂದ ಸಹಾಯ ಮಾಡಲಾಗುವುದು’ ಎಂದರು.

ಡಿವೈಎಸ್‌ಪಿ ದೇವರಾಜ ಬಿ. ಮಾತನಾಡಿದರು.

ಎಪಿಎಂಸಿ ಸದಸ್ಯ ಸುಭಾಶ ಖಂಡ್ರೆ, ಜಗದೀಶ್ ಖಂಡ್ರೆ, ಗುರುಪ್ರಸಾದ ಖಂಡ್ರೆ, ಅಮರ್ ಜಲ್ದೆ, ಗೋವಿಂದರಾವ್‌ ಬಿರಾದಾರ, ಜೈಕಿಶನ್ ಬಿಯಾನಿ, ಯೋಗೇಶ ಅಷ್ಟುರೆ, ರಾಜಕುಮಾರ ಜಲ್ದೆ, ಸಂತೋಷ ಭೂಸಗುಂಡೇ, ತುಕಾರಾಮ ಹುಣಚನಾಳೆ, ತಾಲ್ಲೂಕು ವೈದ್ಯಾಧಿಕಾರಿ ಜ್ಞಾನೇಶ್ವರ ನಿರಾಗುಡೆ, ಮುಖ್ಯ ವೈದ್ಯಾಧಿಕಾರಿ ಅಬ್ದುಲ್ ಖಾದರ್‌ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.