ಶನಿವಾರ, ಅಕ್ಟೋಬರ್ 23, 2021
21 °C

ಪರಿಸರ ಸಂರಕ್ಷಣೆಯಿಂದ ಓಜೋನ್ ರಕ್ಷಣೆ: ಬಾಬುರಾವ್‌ ದಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಓಜೋನ್ ಪದರಿನ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ. ಪರಿಸರ ಸಂರಕ್ಷಣೆಗೆ ಆದ್ಯತೆ ಕೊಡಬೇಕಾಗಿದೆ ’ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಪ್ರಧಾನ ಕಾರ್ಯದರ್ಶಿ ಬಾಬುರಾವ್‌ ದಾನಿ ಹೇಳಿದರು.

ಇಲ್ಲಿಯ ಬಸವನಗರದಲ್ಲಿರುವ ಅರುಣೋದಯ ಶಾಲೆ ಅವರಣದಲ್ಲಿ ಕರ್ನಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ಕರ್ನಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ತು, ಆರ್ಯಭಟ ಫೌಂಡೇಶನ್ ಹಾಗೂ ಚಾರಿಟಬಲ್ ಟ್ರಸ್ಟ್ ಹಾಗೂ ಹೃಷಿಕೇಶ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ವಿಶ್ವ ಓಜೋನ್ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಭೂಮಿ ಮೇಲಿನ ಜೀವಸತ್ವಗಳಿಗೆ ಓಜೋನ್ ರಕ್ಷಾ ಕವಚದಂತಿದೆ. ಸೂರ್ಯನಿಂದ ನೇರವಾಗಿ ಬರುವ ಹಾನಿಕಾರಣ ಕಿರಣಗಳಿಂದ ಪಾರು ಮಾಡುವ ಶಕ್ತಿ ಇದೆ, ಇಂದು ವಾಯು ಮಾಲಿನ್ಯದಿಂದ ಅದು ತೀರ ತೆಳುವಾಗುತ್ತ ಸಾಗಿದೆ’ ಎಂದು ತಿಳಿಸಿದರು.
ಮಾತೆ ಮಾಣಿಕೇಶ್ವರಿ ಕಾಲೇಜಿನ ಪ್ರಾಚಾರ್ಯ ಲೋಕೇಶ ಉಡಬಾಳೆ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ತಿನ ಕಾರ್ಯದರ್ಶಿ ಸಂಜೀವಕುಮಾರ ಸ್ವಾಮಿ ವಿಶೇಷ ಉಪನ್ಯಾಸ ನೀಡಿದರು.

ಹೃಷಿಕೇಶ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರಾಜೇಂದ್ರ ಮಣಗೆರೆ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ತಜ್ಞ ಡಾ.ಆನಂದರಾವ್, ಕರುನಾಡು ವಿಜ್ಞಾನ ಅಕಾಡೆಮಿ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಥ ಬೆಳಕೆರೆ, ನವೀನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕಾಮಶೆಟ್ಟಿ ಚಿಕ್ಕಬಸೆ, ಪ್ರಗತಿ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅರವಿಂದ ಕುಲಕರ್ಣಿ, ಭಾತಂಬ್ರಾ ವಂದೆ ಮಾತರಂ ಶಾಲೆ ಮುಖ್ಯ ಗುರು ರಾಜಕುಮಾರ ಬಿರಾದಾರ, ಶಿಕ್ಷಕರಾದ ಸುವರ್ಣಾ ಜಲಾದೆ, ಸುವರ್ಣಾ ಪಾಟೀಲ, ಸ್ವರೂಪಾರಾಣಿ, ಶಾರದಾ ಉಪ್ಪೆ, ಪುರುಷೋತ್ತಮ, ಆಕಾಶ, ಮಾರೂತೆಪ್ಪ ಇದ್ದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಂದೆ ಮಾತ್ರಂ ಶಾಲೆಯ ಪ್ರಾರ್ಥನಾ ಪಾಟೀಲ, ಅರುಣೋದಯ ಶಾಲೆಯ ಭಾಗ್ಯಶ್ರೀ, ಅಂಬೇಡ್ಕರ್ ತತ್ವ ಪ್ರೌಢಶಾಲೆಯ ಶಾರದಾ, ಹುಮನಾಬಾದ್ ಕಾಳಲಿಂಗೇಶ್ವರ ಶಾಲೆಯ ಅಮರನಾಥ ಅವರಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು.

ಶಿಕ್ಷಕ ದಿಲೀಪಕುಮಾರ ಸ್ವಾಗತಿಸಿದರು, ಸಂತೋಷ ಮಂಗಳುರೆ ನಿರೂಪಿಸಿದರು. ಮುಖ್ಯಶಿಕ್ಷಕ ಬಸವರಾಜ ಮುಗಟಾಪುರೆ ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು