





ಪಾಪನಾಶ ದೇವಸ್ಥಾನದ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಯಾರು ಎಷ್ಟೇ ತಿಪ್ಪರಲಾಗ ಹಾಕಿದರೂ ಅಭಿವೃದ್ಧಿ ನಿಲ್ಲಲ್ಲಈಶ್ವರ ಬಿ. ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ
ಹತ್ತು ವರ್ಷ ಸಂಸದರಾಗಿದ್ದರೂ ಅವರದ್ದೇ ಡಬಲ್ ಎಂಜಿನ್ ಸರ್ಕಾರವಿದ್ದರೂ ಏನೂ ಮಾಡಲಿಲ್ಲ. ಈಗ ದೇವಸ್ಥಾನದ ಎದುರು ತಮಾಷೆ ಮಾಡುವುದು ಎಷ್ಟು ಸರಿರಹೀಂ ಖಾನ್ ಪೌರಾಡಳಿತ ಸಚಿವ
ಸರ್ಕಾರದ ದುಡ್ಡು ಜನರ ತೆರಿಗೆಯ ದುಡ್ಡು. ಅದರ ಮೇಲೆ ಎಲ್ಲರ ಹಕ್ಕಿದೆ. ಜನಪ್ರತಿನಿಧಿಯಾಗಿ ಕಾಮಗಾರಿಗೆ ಚಾಲನೆ ಕೊಡುತ್ತಿರುವೆ. ಇದರಲ್ಲೇನು ತಪ್ಪಿದೆ?ಸಾಗರ ಖಂಡ್ರೆ ಸಂಸದ
ಇದು ಆರೋಗ್ಯಕರ ರಾಜಕಾರಣವಲ್ಲ. ಚುನಾವಣೆ ಮುಗಿದ ನಂತರ ಕೇವಲ ಅಭಿವೃದ್ಧಿ ಕೆಲಸ ಮಾಡಬೇಕು. ಬಿಜೆಪಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆಡಾ. ಚಂದ್ರಶೇಖರ ಪಾಟೀಲ ವಿಧಾನ ಪರಿಷತ್ ಸದಸ್ಯ
ಜಿಲ್ಲಾ ಉಸ್ತುವಾರಿ ಸಚಿವರು ಸಮಾಜದ ಶಾಂತಿ ಕದಡುವ ಕೆಲಸ ಮಾಡಿದ್ದಾರೆ. ಕೇಂದ್ರ ಹಣ ಕೊಟ್ಟಿದೆ. ಆದರೆ ದೇಶದ ಪ್ರಧಾನಮಂತ್ರಿ ಭಾವಚಿತ್ರ ಬಳಸಿಲ್ಲಶಶಿಧರ ಹೊಸಳ್ಳಿ ಸದಸ್ಯ ಬೀದರ್ ಮಹಾನಗರ ಪಾಲಿಕೆ ಸದಸ್ಯ
ಜಿಲ್ಲಾಡಳಿತದ ಕಾರ್ಯಕ್ರಮಕ್ಕೆ ನಮ್ಮ ಅಭ್ಯಂತರವಿರಲಿಲ್ಲ. ಆದರೂ ನಮ್ಮನ್ನು ಪೂಜೆಗೆ ತಡೆದಿದ್ದಾರೆ. ಇದಕ್ಕೆಲ್ಲ ಜಿಲ್ಲಾಡಳಿತವೇ ಹೊಣೆಸೋಮನಾಥ ಪಾಟೀಲ ಜಿಲ್ಲಾಧ್ಯಕ್ಷ ಬಿಜೆಪಿ
ಪೊಲೀಸರನ್ನು ನಿಯೋಜಿಸಿ ಬಿಜೆಪಿಯವರಿಗೆ ಪೂಜೆಗೆ ಅಡ್ಡಿಪಡಿಸಿರುವ ಕ್ರಮ ಸರಿಯಲ್ಲ. ಇದು ಸಂವಿಧಾನ ಮತ್ತು ಪ್ರಜಾತಂತ್ರ ವಿರೋಧಿಡಾ. ಸಿದ್ದಲಿಂಗಪ್ಪ ಪಾಟೀಲ ಶಾಸಕ
ನಾವು ಪೂಜೆ ಸಲ್ಲಿಸಿದರೆ ಸರ್ಕಾರಿ ಕಾರ್ಯಕ್ರಮಕ್ಕೆ ಹೇಗೆ ಅಡ್ಡಿಪಡಿಸಿದಂತಾಗುತ್ತದೆ. ಪ್ರಜಾತಂತ್ರದಲ್ಲಿ ಧಾರ್ಮಿಕ ಆಚರಣೆ ತಡೆಯುವುದು ಸರಿಯಲ್ಲಡಾ. ಶೈಲೇಂದ್ರ ಕೆ. ಬೆಲ್ದಾಳೆ ಶಾಸಕ
ಪಾಪನಾಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವುದು ಪ್ರತಿಯೊಬ್ಬರ ಹಕ್ಕು. ಅದಕ್ಕೆ ನಮ್ಮನ್ನು ತಡೆಯೊಡ್ಡಿರುವುದು ಸರಿಯಲ್ಲ. ಇದು ಸರ್ವಾಧಿಕಾರ ಧೋರಣೆ ಭಗವಂತಖೂಬಾ ಕೇಂದ್ರದ ಮಾಜಿಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.