ಮಂಗಳವಾರ, ಫೆಬ್ರವರಿ 25, 2020
19 °C

ದಾಬಕಾ(ಸಿ): ಪಿಂಚಣಿ ಅದಾಲತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ‘ನೂತನ ತಾಲ್ಲೂಕು ಕೇಂದ್ರ, ದಾಬಕಾ ಹೋಬಳಿ ಕೇಂದ್ರದ ಸುತ್ತಮುತ್ತಲಿನ 16 ಗ್ರಾಮಗಳು ಸೇರ್ಪಡೆಯಾಗಿವೆ. ಅದಾಲತ್‍ನಲ್ಲಿ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಸ್ಪಂದಿಸಿ ಪರಿಹರಿಸಲಾಗುವುದು’ ಎಂದು ಕಮಲನಗರ ತಹಶೀಲ್ದಾರ್ ರಮೇಶ ಪೇದ್ದೆ ಹೇಳಿದರು.

ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ದಾಬಕಾ(ಸಿ) ಗ್ರಾಮದ ನಾಡ ತಹಸೀಲ್ ಕಚೇರಿಯಲ್ಲಿ ನಡೆದ ಪಿಂಚಣಿ ಹಾಗೂ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ವಿಧವಾ , ವೃದ್ಧಾಪ್ಯ, ಅಂಗವಿಕಲ, ಇಂದಿರಾ ವೇತನ, ಸಂಧ್ಯಾ ಸುರಕ್ಷಾ, ರೈತರ ಪಹಣಿ ತಿದ್ದುಪಡಿ ಸೇರಿದಂತೆ ವಿವಿಧ ತಾಂತ್ರಿಕ ದೋಷಗಳಿಂದ ನನೆಗುದಿಗೆ ಬಿದ್ದಿದ್ದು, ಶೀಘ್ರದಲ್ಲಿಯೇ ವಿಲೇವಾರಿ ಮಾಡುವುದಾಗಿ ತಿಳಿಸಿದರು.

ಮನಸ್ವಿನಿ-02, ವಿಧವಾ ವೇತನ-02 ಅಂಗವಿಕಲವೇತನ 06, ಎಸ್‌ಎಸ್‌ವೈ 18, ಇಂದಿರಾಗಾಂಧಿ ವೇತನ 10, ಹಾಗೂ ಪಹಣಿ ತಿದ್ದುಪಡಿ 02 ಜನಸಾಮಾನ್ಯರ ಮತ್ತು ಗ್ರಾಮೀಣ ರೈತರು, ವಿಧವಾ ವೇತನದಾರರ, ಅಂಗವೀಕಲರ ವೇತರ ಸೇರಿದಂತೆ ಇನ್ನಿತರ ಸಮಸ್ಯೆಗಳ ಮತ್ತು ಕುಂದು ಕೊರತೆಯಿದ್ದಲ್ಲಿ ಕೂಡಲೇ ಕಂದಾಯ ಅದಾಲತ್‍ದಲ್ಲಿ ಮನವಿ ಸಲ್ಲಿಸಬಹುದಾಗಿದೆ ಎಂದು ಮನವಿ ಮಾಡಿದರು.

ನಾಡ ತಹಸೀಲ್ದಾರ್ ಸೋಮಶೇಖರ, ಗ್ರಾಮ ಲೆಕ್ಕಿಗ ಸಂಜೀವಕುಮಾರ ರಾಠೋಡ ಹಾಗೂ ತಲಾಟಿ ಸುನೀಕುಮಾರ ಸಾಗರ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)